🎯C-DAC ನಲ್ಲಿ ಭರ್ಜರಿ ನೇಮಕಾತಿ – C-DAC ನೇಮಕಾತಿ 2026 ಪ್ರಾಜೆಕ್ಟ್  ಎಂಜಿನಿಯರ್ ಹಾಗು ಮತ್ತಷ್ಟು ಪೋಸ್ಟ್ ಗಳಿಗೆ ಅರ್ಜಿ ಆಹ್ವಾನ.

C-DAC ನಲ್ಲಿ ಭರ್ಜರಿ ನೇಮಕಾತಿ – C-DAC ನೇಮಕಾತಿ 2026 ಪ್ರಾಜೆಕ್ಟ್  ಎಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ.

The Center For Development Of Advance Computing (C- DAC) ಇದು ಕೇಂದ್ರ ಸರಕಾರದ ನಹೀತಿ ತಂತ್ರಜ್ಞಾನದ ಅಧೀನದ ಸಂಸ್ಥೆಯಾಗಿದ್ದು, ಪ್ರಾಜೆಕ್ಟ್  ಎಂಜಿನಿಯರ್, ಪ್ರಾಜೆಕ್ಟ್  ಮ್ಯಾನೇಜರ್, ಪ್ರಾಜೆಕ್ಟ್  ಟೆಕ್ನೀಷಿಯನ್ ಹಾಗು ಎಐ ಸೈಬರ್ ಸೆಕ್ಯೂರಿಟಿ ಸೇರಿದಂತೆ ಒಟ್ಟು  805 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. C-DAC ನೇಮಕಾತಿ 2026 ನೇ ಸಾಲಿನ ಹೊಸ ವರ್ಷದ ಮೊದಲ ನೇಮಕಾತಿಯನ್ನು ಅಧಿಕೃತವಾಗಿ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗು ಆಸಕ್ತ ಇಂಜಿನಿಯರಿಂಗ್ ಪದವೀದರರು ಮತ್ತು ಅಭ್ಯರ್ಥಿಗಳು ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವವರಿಗೆ ಈ ನೇಮಕಾತಿ ಒಂದು ಉತ್ತಮ ಅವಕಾಶವಾಗಿದೆ. ಬನ್ನಿ ಈ ನೇಮಕಾತಿಯ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.

🧠 C-DAC ನೇಮಕಾತಿಯ ಮಾಹಿತಿ

ನೇಮಕಾತಿ ವಿವರ ಮಾಹಿತಿ 
ಸಂಸ್ಥೆ ಹೆಸರು ದಿ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್  ಕಂಪ್ಯೂಟಿಂಗ್ (C-DAC)
ಒಟ್ಟು ಹುದ್ದೆಗಳು 805
ಉದ್ಯೋಗದ ಸ್ಥಳ ಭಾರತಾದ್ಯಂತ 
ಹುದ್ದೆಗಳ ಹೆಸರು ಪ್ರಾಜೆಕ್ಟ್  ಎಂಜಿನಿಯರ್, ಪ್ರಾಜೆಕ್ಟ್  ಮ್ಯಾನೇಜರ್, ಎಐ ಸೈಬರ್ ಸೆಕ್ಯೂರಿಟಿ ಹಾಗು ಪ್ರಾಜೆಕ್ಟ್  ಟೆಕ್ನೀಷಿಯನ್ ಮತ್ತು ಹಲವು 
ಮಾಸಿಕ ವೇತನ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

📋 C-DAC ನೇಮಕಾತಿ 2026 ಎಷ್ಟು ಹುದ್ದೆಗಳಿವೆ?

ಹುದ್ದೆ ಹುದ್ದೆಗಳ ಸಂಖ್ಯೆ 
ಪ್ರಾಜೆಕ್ಟ್ ಎಂಜಿನಿಯರ್ – AI & ಸೈಬರ್ ಸೆಕ್ಯುರಿಟಿ23
ಪ್ರಾಜೆಕ್ಟ್ ಎಂಜಿನಿಯರ್ – ಕಂಪೈಲರ್ / ಡೀಬಗ್ಗರ್ / ರನ್‌ಟೈಮ್ / HPC / ಸಿಸ್ಟಮ್ ಸಾಫ್ಟ್‌ವೇರ್13
ಪ್ರಾಜೆಕ್ಟ್ ಎಂಜಿನಿಯರ್ – ಕ್ರಿಪ್ಟೋಗ್ರಫಿ ಮತ್ತು ಕ್ರಿಪ್ಟೋ ಮಾಡ್ಯೂಲ್ ಮೌಲ್ಯೀಕರಣ2
ಪ್ರಾಜೆಕ್ಟ್ ಎಂಜಿನಿಯರ್ – ಕ್ವಾಂಟಮ್ ಕಂಪ್ಯೂಟಿಂಗ್ (FPGA / ಎಂಬೆಡೆಡ್ / QKD / ಕ್ವಾಂಟಮ್ ಟೆಕ್)12
ಪ್ರಾಜೆಕ್ಟ್ ಮ್ಯಾನೇಜರ್ – ಹಾರ್ಡ್‌ವೇರ್ / ಸಾಫ್ಟ್‌ವೇರ್ / ಎಂಬೆಡೆಡ್ / AI & ಸೈಬರ್ ಸೆಕ್ಯುರಿಟಿ5
ಯೋಜನಾ ಸೇವೆ ಮತ್ತು ಬೆಂಬಲ – ಮಾನವ ಸಂಪನ್ಮೂಲ ಅಭಿವೃದ್ಧಿ1
ಯೋಜನಾ ಬೆಂಬಲ ಸಿಬ್ಬಂದಿ – ಹಣಕಾಸು ಮತ್ತು ಲೆಕ್ಕಪತ್ರಗಳು1
ಯೋಜನಾ ಬೆಂಬಲ ಸಿಬ್ಬಂದಿ – ಎಂಎಂಜಿ (ವಸ್ತು ನಿರ್ವಹಣೆ)1
ಯೋಜನಾ ಬೆಂಬಲ ಸಿಬ್ಬಂದಿ – ಕಾರ್ಯಾಚರಣೆ ನಿರ್ವಹಣೆ5
ಯೋಜನಾ ಬೆಂಬಲ ಸಿಬ್ಬಂದಿ – ತಾಂತ್ರಿಕ ದಸ್ತಾವೇಜೀಕರಣ5
ಹಿರಿಯ ಯೋಜನಾ ಎಂಜಿನಿಯರ್ – AI & ಸೈಬರ್ ಭದ್ರತೆ10
ಹಿರಿಯ ಯೋಜನಾ ಎಂಜಿನಿಯರ್ – ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಕ್ವಾಂಟಮ್ ತಂತ್ರಜ್ಞಾನಗಳು5
ಹಿರಿಯ ಪ್ರಾಜೆಕ್ಟ್ ಎಂಜಿನಿಯರ್ – ಕಂಪೈಲರ್ / ಡೀಬಗ್ಗರ್ / HPC / ಸಿಸ್ಟಮ್ ಸಾಫ್ಟ್‌ವೇರ್10
C-DAC ನೇಮಕಾತಿ 2026

🎓 ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಯೋಗ್ಯತೆ 

 ಶೈಕ್ಷಣಿಕ ಅರ್ಹತೆ:

C-DAC ನೇಮಕಾತಿ 2026 ರ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಗುಣವಾಗಿ ಇಂಜಿನಿಯರಿಂಗ್ / ಟೆಕ್ನಿಕಲ್ ವಿಭಾಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯಾವ ಯಾವ ಪದವಿಗಳು ಬೇಕು ಎಂಬುದನ್ನು ಈ ಕೆಳಗೆ ನೋಡೋಣ.

🔹BE / B.Tech 

🔹M.Sc / MCA / ME / M.Tech

ಜೊತೆಗೆ ತತ್ಸಮಾನ ಪದವಿ, ಸ್ನಾತಕ್ಕೋತ್ತರ ಪದವಿಯನ್ನು ಮಾನ್ಯತೆ ಪಡೆದ ಕಾಲೇಜಿನಲ್ಲಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸತಕ್ಕದ್ದು. ಪ್ರಮುಖವಾಗಿ ಶೇ.60 ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.

(ಸೂಚನೆ- ಈ ಪದವಿಗಳು ತಂತ್ರಜ್ಞಾನ /ಗಣಿತ /ಕಂಪ್ಯೂಟರ್ -ಸೈನ್ಸ್  ವಿಷಯಗಳಾಗಿರಬೇಕು)


ವಯೋಮಿತಿ (Age Limit)

ಹುದ್ದೆಯ ಪ್ರಕಾರ ವಯೋಮಿತಿಗಳು ಬದಲಾಗಬಹುದು. ಉದಾ: ಗರಿಷ್ಠ 56 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ವಯೋ ಸಡಿಲಿಕೆ 👍

  • SC / ST – 5 ವರ್ಷ 
  • PWD – 10 ವರ್ಷ 
  • OBC – 3 ವರ್ಷ 

💰 ವೇತನ

C-DAC ನೇಮಕಾತಿ 2026- ಈ ಉದ್ಯೋಗಕ್ಕೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಭರ್ಜರಿ ವೇತನ ಸಿಗುವ ಅಂದಾಜಿದೆ. ಉದಾಹರಣೆಯಾಗಿ ಪ್ರಾಜೆಕ್ಟ್ ಎಂಜಿನಿಯರ್ ಹಾಗು ಟೆಕ್ನೀಷಿಯನ್ ಹುದ್ದೆಗೆ ರೂ.39,100 ರಿಂದ ರೂ.75,000 ವರೆಗೆ ನೀಡಬಹುದು ಎಂದು ಅಂದಾಜಿಸಲಾಗಿದೆ.

📍ನೇಮಕಾತಿಯ ಸ್ಥಳಗಳು

ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ದೇಶಾದ್ಯಂತ ವಿವಿಧ C- DAC ಕೇಂದ್ರಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು.

🔹ಬೆಂಗಳೂರು- 93

🔹ಚೆನ್ನೈ – 97

🔹ಹೈದರಾಬಾದ್ -105

🔹ಕೋಲ್ಕತಾ -15

🔹ಮುಂಬಯಿ -27

🔹ನೋಯ್ಡಾ -283

🔹ಪುಣೆ -65

🔹ತಿರುವನಂತಪುರಂ -73

🔹ದೆಹಲಿ -20

ಆಯಾ ಸ್ಥಳಗಳಿಗೆ ಅನುಸಾರವಾಗಿ ಹುದ್ದೆಗಳು ಬದಲಾಗುತ್ತಿರುತ್ತವೆ ಆದ್ದರಿಂದ ಅಭ್ಯರ್ಥಿಗಳು ನಿಮ್ಮ ಆಸಕ್ತ ಪ್ರದೇಶಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಬೇಕು.

🗓️ ಪ್ರಮುಖ ದಿನಾಂಕಗಳು

ವಿವರ ದಿನಾಂಕಗಳು 
ಅರ್ಜಿ ಪ್ರಾರಂಭ 01-02-2026
ಕೊನೆಯ ದಿನಾಂಕ 20-02-2026

ಅರ್ಹತೆ ಇರುವ ಅಭ್ಯರ್ಥಿಗಳು ಕೊನೆಯ ದಿನಾಂಕದ ವರೆಗೆ ಕಾಯದೆ ತಕ್ಷಣವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆ 

✅ಶಾರ್ಟ್ ಲಿಸ್ಟಿಂಗ್ (Short Listing)

✅ಲಿಖಿತ ಪರೀಕ್ಷೆ (Merit List)

✅ಸಂದರ್ಶನ (Interview)

(SBI ಬ್ಯಾಂಕ್ ನಲ್ಲಿ ಭರ್ಜರಿ ನೇಮಕಾತಿ -SBI ನೇಮಕಾತಿ 2026- ಗಮನಿಸಲು ಇಲ್ಲಿ ಕ್ಲಿಕ್ ಮಾಡಿ)

📝 ಅರ್ಜಿ ಸಲ್ಲಿಸುವ ಪ್ರಕ್ರಿಯೆ

C- DAC ನ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸತಕ್ಕದ್ದು.

ಹಂತಗಳು

C-DAC ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿಯನ್ನು ಕಡ್ಡಾಯವಾಗಿ ಆನ್‌ಲೈನ್ ವಿಧಾನದಲ್ಲಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗಿನ ಹಂತಗಳಲ್ಲಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ಕ್ರಮ

ಹಂತ 1:
ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅದರಲ್ಲಿರುವ ಎಲ್ಲಾ ಸೂಚನೆಗಳನ್ನು ಗಮನಿಸಿ.

ಹಂತ 2:
ನೀವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಗೆ ಅಗತ್ಯವಾದ ಅರ್ಹತೆಗಳನ್ನು ಹೊಂದಿದ್ದೀರಾ ಎಂಬುದನ್ನು ಪರಿಶೀಲಿಸಿ.

ಹಂತ 3:
ಅರ್ಜಿಯನ್ನು ತುಂಬುವ ಮೊದಲು ಸಕ್ರಿಯ ಇಮೇಲ್ ಐಡಿ ಮತ್ತು ಬಳಸುವ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇರಬೇಕು.

ಹಂತ 4:
ಅರ್ಜಿಗೆ ಬೇಕಾಗುವ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಅವುಗಳೆಂದರೆ:

  • ಗುರುತಿನ ಚೀಟಿ (ಆಧಾರ್ ಕಾರ್ಡ್ / PAN ಕಾರ್ಡ್ / ಡ್ರೈವಿಂಗ್ ಲೈಸೆನ್ಸ್)
  • ಶೈಕ್ಷಣಿಕ ಪ್ರಮಾಣಪತ್ರಗಳು (Degree / Marks Card)
  • ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ

ಹಂತ 5:
ನಂತರ C-DAC ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: careers.cdac.in

ಹಂತ 6:
ಅಲ್ಲಿ ಕಾಣಿಸುವ “Apply Online” ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 7:
ಅರ್ಜಿಯಲ್ಲಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಮತ್ತು ಪೂರ್ಣವಾಗಿ ನಮೂದಿಸಿ.

ಹಂತ 8:
ಕೋರಿರುವ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.

ಹಂತ 9:
ಅಗತ್ಯವಿರುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.

ಹಂತ 10:
ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಭವಿಷ್ಯಕ್ಕಾಗಿ ಅರ್ಜಿ ಸಂಖ್ಯೆಯನ್ನು ಸುರಕ್ಷಿತವಾಗಿ ನೋಂದಾಯಿಸಿ.

🧰 ಮುಂದಿನ ಆಯ್ಕೆ ಹೇಗೆ?

ಸ್ವೀಕೃತ ಅರ್ಜಿಗಳನ್ನು  ಪರಿಶೀಲಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್  ಮಾಡುತ್ತಾರೆ , ಅನುಭವ ಹಾಗು ಶೈಕ್ಷಣಿಕ ಕ್ಷೇತ್ರದಲ್ಲಿ ಪಡೆದ ಅಂಕಗಳ ಆದಾರದ ಮೇಲೆ ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ. ಶಾರ್ಟ್ ಲಿಸ್ಟ್  ಆದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆಯುತ್ತಾರೆ, ನಂತರ ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

🌟 ಈ ನೇಮಕಾತಿಯಿಂದ ಏನೇನು ಲಾಭ?

✔️ ದೇಶದ ಪ್ರಸಿದ್ಧ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ 

✔️ಭಾರತದ ಪ್ರಮುಖ ನಗರಗಳಲ್ಲಿ ಕೆಲಸ ಮಾಡುವ ಅವಕಾಶ 

✔️ತಂತ್ರಜ್ಞಾನ ಕ್ಷೇತ್ರದ ಶಕ್ತ ಜನರೊಂದಿಗೆ ಕೆಲಸ ಮಾಡಬಹುದು

✔️ಈ ಉದ್ಯೋಗದಿಂದ ನಿಮ್ಮ ಟೆಕ್ನಿಕಲ್ ಬುದ್ಧಿ ಹೆಚ್ಚಾಗುತ್ತದೆ.

✔️ಸಮಾಜದಲ್ಲಿ ಒಳ್ಳೆಯ ಮರ್ಯಾದೆ.

✔️ಕೇಂದ್ರ ಸರಕಾರದ ಕೈತುಂಬ ಸಂಬಳ ಸಿಗಲಿದೆ.

ಮುಖ್ಯವಾದ ಲಿಂಕ್ ಗಳು

  • ಅಧಿಕೃತ ಅಧಿಸೂಚನೆ – C- DAC ನ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ.
  • ಆನ್ಲೈನ್ ಅರ್ಜಿ –careers.cdac.in
  • ಅಧಿಕೃತ ವೆಬ್ಸೈಟ್ – https://careers.cdac.in

💡ಕೊನೆಯ ಸೂಚನೆ

C-DAC ನೇಮಕಾತಿ 2026 ಅಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಆಸಕ್ತಿ ಇರುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಅರ್ಜಿಯನ್ನು ಸಲ್ಲಿಸುವ ಮೊದಲು ಅಭ್ಯರ್ಥಿಗಳು C-DAC ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಮತ್ತು ಜಾಗರೂಕತೆಯಿಂದ ಓದಿಕೊಳ್ಳುವುದು ಅಗತ್ಯ. ಅರ್ಜಿಯಲ್ಲಿ ತಪ್ಪಾದ ಮಾಹಿತಿ ನೀಡಿದರೆ ಅಥವಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡದಿದ್ದರೆ ಅರ್ಜಿಯನ್ನು ಅಮಾನ್ಯಗೊಳಿಸುವ ಸಾಧ್ಯತೆ ಇದೆ.

ಆದ್ದರಿಂದ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳಬಹುದು

Leave a Comment