New Ration Card : ಕರ್ನಾಟಕದಲ್ಲಿ ಫೆಬ್ರುವರಿಯಿಂದ ಹೊಸ ration card ಅರ್ಜಿ ಸಲ್ಲಿಸಲು ಪ್ರಾರಂಭವಾಗಿದೆ- ಅಹಾರ ಇಲಾಖೆಯಿಂದ ಮಾಹಿತಿ.
ನಮ್ಮ ರಾಜ್ಯದಲ್ಲಿ ಎಷ್ಟೋ ಹೊಸ ಬಡ ಕುಟುಂಬಗಳಿಗೆ ಬಹುಕಾಲದಿಂದ ಕಾಯುತ್ತಿದ್ದ ಹೊಸ ಪಡಿತರ ಚೀಟಿ ಅರ್ಜಿ ಹಾಕುವ ಪ್ರಕ್ರಿಯೆಗೆ ಕೊನೆಗೂ ಚಾಲನೆ ಸಿಕ್ಕಂತಾಗಿದೆ. ಸರ್ಕಾರವು ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸಲು ಫೆಬ್ರವರಿ ತಿಂಗಳಿನಿಂದಲೇ ತಯಾರಿ ನಡೆಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್.ಮುನಿಯಪ್ಪ ಪ್ರಮುಖ ಸಿಹಿ ಸುದ್ದಿ ನೀಡಿದ್ದಾರೆ. ಕರ್ನಾಟಕದ ರೇಷನ್ ವ್ಯವಸ್ಥೆಯಲ್ಲಿ ಅನರ್ಹ ಕಾರ್ಡುಗಳ ವಿಲೇವಾರಿ,ಪರಿಷ್ಕರಣೆ ಹಾಗು ನಿಜವಾಗಿಯೂ ಅರ್ಹರಾಗಿರುವ ಬಡ ಕುಟುಂಬಗಳಿಗೆ ನ್ಯಾಯ ಒದಗಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.ಇದರಿಂದ ನಿಜವಾದ ಬಡ ಕುಟುಂಬಗಳಿಗೆ ಹಾಗು ಮಾಧ್ಯಮ ವರ್ಗದ ಜನರಿಗೆ ರಾಜ್ಯದ ಆಹಾರ ಭದ್ರತಾ ಯೋಜನೆಗಳ ಲಾಭ ನೇರವಾಗಿ ದೊರೆಯುತ್ತದೆ.
Table of Contents
New Ration Card ಅರ್ಜಿ ಈಗೇಕೆ?- ಇಷ್ಟು ದಿನ ವಿಳಂಬವಾಗಲು ಕಾರಣ:
ಕಳೆದ ಸುಮಾರು ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಅರ್ಹ ಇಲ್ಲದವರ ಬಿಪಿಎಲ್ (BPL) ರೇಷನ್ ಕಾರ್ಡುಗಳ ಹಾವಳಿ ಹೆಚ್ಚಾಗಿದ್ದು ಇದು ಸರಕಾರದ ಗಮನಕ್ಕೆ ಬಂದಿತ್ತು. ಯಾವುದೇ ರಾಜ್ಯದಲ್ಲಿ ಸಾಮಾನ್ಯವಾಗಿ ಒಟ್ಟು ಜನಸಂಖ್ಯೆಯ ಶೇ.50ರಷ್ಟೇ ಬಿಪಿಎಲ್ ರೇಷನ್ ಕಾರ್ಡುಗಳಿರಬೇಕು ಎಂಬ ಕಠಿಣ ನಿಯಮವಿದೆ. ಅದಾಗ್ಯೂ,ನಮ್ಮ ರಾಜ್ಯದಲ್ಲಿ ಇದರ ಪ್ರಮಾಣ ಶೇ.75 ರಷ್ಟು ತಲುಪಿದ್ದು ವಿಪರ್ಯಾಸವಾಗಿದೆ. ಇದು ಸರ್ಕಾರಕ್ಕೆ ಗಂಭೀರ ಚಿಂತೆಯ ವಿಷಯವಾಗಿ ಪರಿಣಮಿಸಿದೆ.
ಈ ರೀತಿ ಆಗಲು ಮುಖ್ಯ ಕಾರಣಗಳು:
- ಅರ್ಹರಲ್ಲದ ಜನರು ಬಿಪಿಎಲ್ ಕಾರ್ಡ್ ಪಡೆದಿರುವುದು.
- ಎರಡು ಅಥವಾ ಹೆಚ್ಚು ಬಿಪಿಎಲ್ ರೇಷನ್ ಕಾರ್ಡುಗಳು ಒಂದೇ ಕುಟುಂಬಕ್ಕೆ ಇರುವುದು.
- ಆದಾಯ ಮಿತಿ ಮೀರಿದ್ದರೂ ಬಿಪಿಎಲ್ ಕಾರ್ಡ್ ಹೊಂದಿರುವುದು.
ಈ ಎಲ್ಲ ಕಾರಣಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಕರ್ನಾಟಕ ಸರ್ಕಾರವು ಹೊಸ ಅರ್ಜಿಗಳನ್ನು ಹಿಡಿದಿಟ್ಟಿತ್ತು.
ಅರ್ಹ ಅಲ್ಲದವರ ಬಿಪಿಎಲ್ ರೇಷನ್ ಕಾರ್ಡುಗಳು ಅಮಾನ್ಯೀಕರಣ ಪ್ರಕ್ರಿಯೆ:
ಅನರ್ಹ ಬಿಪಿಎಲ್(BPL) ರೇಷನ್ ಕಾರ್ಡ್ ಹೊಂದಿದವರನ್ನು ಗುರುತಿಸಿ ಅವುಗಳನ್ನು ಎಪಿಎಲ್(APL) ಕಾರ್ಡುಗಳಾಗಿ ಪರಿವರ್ತಿಸುವ ಕೆಲಸಗಳನ್ನು ಸರ್ಕಾರವು ಈಗಾಗಲೇ ಪ್ರಾರಂಭಿಸಿದೆ. ಸರ್ಕಾರವು ಈ ಪ್ರಕ್ರಿಯೆ ಮುಗಿದ ನಂತರವೇ New Ration Card ಅರ್ಜಿಗಳನ್ನು ಸ್ವೀಕರಿಸಲು ತೀರ್ಮಾನಿಸಿದೆ.

ಡಬಲ್ ಕಾರ್ಡ್ ಸಮಸ್ಯೆ ಎಂದರೇನು?
ಪ್ರಮುಖವಾಗಿ ಕಂಡುಬಂದ ಇತ್ತೀಚಿನ ಸಮಸ್ಯೆ ಏನೆಂದರೆ:
- ಮದುವೆಯಾದ ಬಳಿಕ ಬೇರೆ ಮನೆ ಮಾಡಿ ವಾಸಿಸುತ್ತಿದ್ದೇವೆ ಎಂದು ಹೇಳಿ ಹೊಸ ಬಿಪಿಎಲ್ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವುದು.
- ಒಂದೇ ಕುಟುಂಬದ ಸದಸ್ಯರು ಮತ್ತೊಂದು ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕುವುದು.
ಈ ಕಾರಣಗಳಿಂದ ಒಂದೇ ಕುಟುಂಬಕ್ಕೆ ಎರಡೆರಡು ಬಾರಿ ಪಡಿತರ ಅಕ್ಕಿ ಮತ್ತು ಧಾನ್ಯಗಳು ವಿತರಣೆ ಆಗುತ್ತಿರುವುದು ಪತ್ತೆಯಾಗಿದೆ.
ಈ ರೀತಿಯ ಸಮಸ್ಯೆಗಳನ್ನು ತಡೆಯಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ವೈದ್ಯಕೀಯ(ಆರೋಗ್ಯ ಸಮಸ್ಯೆ) ಆಧಾರದ ಮೇಲೆ ಪಡೆದ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ:
ಮೊದಲು ಅನೇಕ ಆರೋಗ್ಯ ಸಮಸ್ಯೆ ಅಥವಾ ವೈದ್ಯಕೀಯ ಕಾರಣಗಳನ್ನು ಹೇಳಿ ಬಿಪಿಎಲ್ ಕಾರ್ಡ್ ಪಡೆಯಲು ಅನುಮತಿ ನೀಡಲಾಗಿತ್ತು. ಆದರೆ ಈ ಅವಕಾಶಗಳನ್ನು ದುರುಪಯೋಗ ಪಡಿಸಿಕೊಂಡು ಅರ್ಹ ಅಲ್ಲದವರು ಬಿಪಿಎಲ್ ಕಾರ್ಡುಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ.
ಈ ಕಾರಣದಿಂದಾಗಿ:
- ಸರಿಸುಮಾರು 3 ಲಕ್ಷಕ್ಕಿಂತ ಹೆಚ್ಚು ಅರ್ಜಿಗಳನ್ನು ಪರಿಷ್ಕರಣೆ ನಡೆಸುತ್ತಿದ್ದಾರೆ.
- ಪರಿಷ್ಕರಣೆ ಮುಗಿದ ನಂತರವೇ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದು ಅಹಾರ ಇಲಾಖೆ ಸ್ಪಷ್ಟನೆ ನೀಡಿದೆ.
(BPL Card ರದ್ದತಿ 2026: ತೆರಿಗೆದಾರರಿಗೆ ಮತ್ತು ಕಾರು ಮಾಲೀಕರಿಗೆ ಕಟ್ಟು ನಿಟ್ಟಿನ ನಿಯಮಗಳು ಜಾರಿ)
ಈ ತಿಂಗಳಿನಿಂದಲೇ New Ration Card ಅರ್ಜಿ- ಯಾರಿಗೆ ಬಿಪಿಎಲ್ ಕಾರ್ಡು?
New Ration Card ಗೆ ಅರ್ಜಿ ಸಲ್ಲಿಸಲು ಅರ್ಹತವರು ಮಾನದಂಡಗಳು (ಸಂಭವನೀಯ):
- ಒಂದು ಕುಟುಂಬದ ಒಟ್ಟು ವಾರ್ಷಿಕ ಆದಾಯ ಸರ್ಕಾರ ಗೊತ್ತುಪಡಿಸಿದ ಮಿತಿಯೊಳಗೆ ಇರತಕ್ಕದ್ದು.
- ಈಗಾಗಲೇ ಯಾವುದೇ ಪಡಿತರ ಚೀಟಿ (ಎಪಿಎಲ್,ಬಿಪಿಎಲ್) ಹೊಂದಿರಬಾರದು.
- ತೆರಿಗೆ ಕಟ್ಟಿದ ವಿವರಣೆಗಳು ಹೊಂದಾಣಿಕೆಯಾಗಬೇಕು.
- ಒಂದು ತುಂಬು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ಮಾತ್ರ.
ರಾಜ್ಯ ಸರ್ಕಾರವು ಅಧಿಕೃತ ಮಾನದಂಡಗಳನ್ನು ಶೀಘ್ರದಲ್ಲೇ ಹೊರಡಿಸುವ ಸಾಧ್ಯತೆ ಇದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಬಡ ಕುಟುಂಬಗಳಿಗೆ ಮತ್ತು ಅಸಂಘಟಿತ ವರ್ಗದ ಕೂಲಿ ಕಾರ್ಮಿಕರಿಗೆ ಅಂದರೆ ಶ್ರಮಿಕ ವರ್ಗದವರಿಗೆ ಇಂತವರು E-ಶ್ರಮ ಕಾರ್ಡ್ ಹೊಂದಿದ್ದರೆ ಪ್ರಸ್ತುತ New Ration Card ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ನಿಮ್ಮ ಹತ್ತಿರ ಶ್ರಮ ಕಾರ್ಡಿದ್ದರೆ ನೀವು ಕೂಡಲೇ ಬೆಂಗಳೂರು ಒನ್,ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಇಲ್ಲವಾದರೆ ತುರ್ತು ಚಿಕಿತ್ಸೆಗೆ ಅಥವಾ ವೈದ್ಯಕೀಯ ಕಾರಣಕ್ಕಾಗಿ ಪಡಿತರ ಚೀಟಿ ಅಗತ್ಯವಿದ್ದರೆ ಅಂಥವರು ಚಿಕಿತ್ಸೆಗೆ ಬೇಕಾಗುವ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಆಹಾರ ಇಲಾಖೆಗೆ ಅಥವಾ ತಹಶೀಲ್ದಾರ್ ಆಫೀಸ್ ಗೆ ಭೇಟಿ ನೀಡಿ New Ration Card ಗೆ ಅರ್ಜಿ ಸಲ್ಲಿಸಬಹುದು.
(ರೇಷನ್ ಕಾರ್ಡ್ ಸ್ಟೇಟಸ್ ನ ಸಂಪೂರ್ಣ ಮಾಹಿತಿಯನ್ನು ನೀವು ಈಗ ಮನೆಯಲ್ಲೇ ಪಡೆಯಬಹುದು)
ಪಡಿತರ ವಿತರಣೆಯಲ್ಲಿ ಮಹತ್ತರ ಬದಲಾವಣೆ-ಅಕ್ಕಿ ಬದಲು ರಾಗಿ ಮತ್ತು ಜೋಳ:
ಸರಕಾರದ ಇನ್ನೊಂದು ಮುಖ್ಯ ಬದಲಾವಣೆ ಎಂದರೆ ಅಕ್ಕಿಯ ಬದಲು ಅಥವಾ ಅಕ್ಕಿಯ ಜೊತೆಗೆ ಸ್ಥಳೀಯ ಧಾನ್ಯಗಳನ್ನು ಪರಿಚಯಿಸಲು ನಿರ್ಧರಿಸಿದೆ.
ಇಲ್ಲಿಯವರೆಗೆ:
- ಪ್ರತಿ ವ್ಯಕ್ತಿಗೆ ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿ ವಿತರಿಸುತ್ತಿದೆ.
- ಹೆಚ್ಚುವರಿ 5 ಕೆಜಿ ಅಕ್ಕಿ ರಾಜ್ಯ ಸರ್ಕಾರ ವಿತರಿಸುತ್ತಿತ್ತು.
ಮುಂಬರುವ ದಿನಗಳಲ್ಲಿ:
- ದಕ್ಷಿಣ ಕರ್ನಾಟಕದ ಪ್ರಮುಖ ಬೆಳೆ ರಾಗಿಯನ್ನು ದಕ್ಷಿಣ ಕರ್ನಾಟಕದಲ್ಲಿ
- ಉತ್ತರ ಕರ್ನಾಟಕ ಪ್ರಮುಖ ಬೆಳೆ ಜೋಳವನ್ನು ಉತ್ತರ ಕರ್ನಾಟಕದಲ್ಲಿ
- ಹಾಗು ಇವುಗಳ ಜೊತೆಗೆ ತೊಗರಿ ಬೆಳೆ ವಿತರಿಸುವ ಬಗ್ಗೆ ನಿರ್ಧರಿಸಲಾಗಿದೆ.
ಸ್ಥಳೀಯ ರೈತರಿಗೆ ಬೆಂಬಲ, ಜನರಿಗೆ ಪೌಷ್ಠಿಕ ಆಹಾರ:
ಇದರಿಂದ:
- ಸ್ಥಳೀಯ ರೈತರಿಗೆ ಉತ್ತಮ ಲಾಭ
- ಬಡ ಜನರಿಗೆ ಪೌಷ್ಠಿಕ ಆಹಾರ
- ಅಕ್ಕಿಯ ಮೇಲಿನ ಜನರ ಅವಲಂಬನೆ ಕಡಿಮೆ ಮಾಡುವುದು.
- ರಾಜ್ಯದ ರೈತರಿಗೆ ಕೃಷಿಯ ಉತ್ತೇಜನ ನೀಡಲಿದೆ ಎಂದು ಸರ್ಕಾರ ವಿಶ್ವಾಸ ಇಟ್ಟಿದೆ.
ಈ ಪ್ರಕ್ರಿಯೆಗೆ ಟೆಂಡರ್ ಯಾವಾಗ ಕರೆಯುತ್ತಾರೆ?
ಈ ಧಾನ್ಯಗಳ ( ರಾಗಿ,ಜೋಳ ಮತ್ತು ತೊಗರಿಬೇಳೆ) ಖರೀದಿಗೆ ಸಂಬಂಧಪಟ್ಟ ಹಾಗೆ:
- ಶೀಘ್ರದಲ್ಲೇ ಟೆಂಡರ್ ಕರೆಯುವ ಪ್ರಕ್ರಿಯೆ ಶುರುವಾಗುವುದು.
- ಮಾನದಂಡದ ಪ್ರಕಾರ ಗುಣಮಟ್ಟವೇ ಮುಖ್ಯ.
- ತೊಗರಿಗೆ ಪ್ರಸಿದ್ಧಿಯಾಗಿರುವ ಕಲಬುರಗಿಗೆ ಅಧ್ಯತೆ ನೀಡುವ ಸೂಚನೆಗಳಿವೆ.
ಸರ್ಕಾರದಿಂದ ಅಧಿಕೃತ ಮಾಹಿತಿ ಬಂದ ನಂತರವೇ ಎಲ್ಲವು ಸ್ಪಷ್ಟವಾಗಲಿದೆ.
ಅಂತಿಮ ಮಾತುಗಳು.
ಹೊಸ ಪಡಿತರ ಚೀಟಿ ಅರ್ಜಿಗಳು ಫೆಬ್ರವರಿಂದ ಆರಂಭವಾಗುವುದು:
- ಅರ್ಹ ಬಡ ಕುಟುಂಬಗಳಿಗೆ ನಿಜವಾಗಿಯೂ ವರದಾನವಾಗಿದೆ.
- ಅನರ್ಹರಿಗೆ ತೊಂದರೆ ಯಾಗಬಹುದು.
- ರೇಷನ್ ವ್ಯವಸ್ಥೆಯಲ್ಲಿ ಪಾರದರ್ಶಕತೆ.
- ಸ್ಥಳೀಯ ರೈತರ ಬೆಳೆಗಳಿಗೆ ಉತ್ತೇಜನ.
ಈ ನಾಲ್ಕು ಮುಖ್ಯ ಗುರಿಗಳನ್ನು ಸಾಧಿಸಲು ಸರ್ಕಾರವು ಪರಿಷ್ಕರಣೆಯನ್ನು ಹಮ್ಮಿಕೊಂಡಿದೆ.
ಸರಕಾರದ ಅಧಿಕೃತ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು, ಅರ್ಹ ಕುಟುಂಬಗಳು ಬೇಕಾಗಿರುವ ಮತ್ತು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ.

Prathwiraj Chanapannavar is a passionate blogger and digital content writer with over 3 years of experience in blog writing. He specializes in creating simple, informative, and useful articles about government schemes, agriculture, technology, and daily life topics. Through his blog, he aims to provide clear and reliable information that helps readers stay updated with the latest news, opportunities, and useful guides. His writing style focuses on easy-to-understand language so that everyone can benefit from the information.