Central Bank Of India ನೇಮಕಾತಿ 2026 – ಪೂರ್ಣ ವಿವರಣೆ (Foreign Exchange & Marketing Officer Posts)
ದೇಶದ ಪ್ರಮುಖ ಸರ್ಕಾರಿ ಬ್ಯಾಂಕುಗಳಲ್ಲಿ ಒಂದಾಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (central bank of india) 2026ನೇ ಹೊಸ ವರ್ಷದ ಮಹತ್ವದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಮುಖವಾಗಿ ಈ ನೇಮಕಾತಿಯಲ್ಲಿ ಫಾರಿನ್ ಎಕ್ಸ್ಚೇಂಜ್ ಆಫೀಸರ್ (Foreign Exchange Officer), ಹಾಗು ಮಾರ್ಕೆಟಿಂಗ್ ಆಫೀಸರ್ (Marketing Officer) ಹುದ್ದೆಗಳ ಭರ್ಜರಿ ನೇಮಕಾತಿಯಾಗಿ ಒಟ್ಟು 350 ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಉತ್ತಮ ವ್ಯಕ್ತಿತ್ವ ಮತ್ತು ವೃತ್ತಿ ಜೀವನವನ್ನು ನಿರ್ಮಿಸಲು ಬಯಸುವ ವಿದ್ಯಾರ್ಥಿಗಳು ಹಾಗು ನಿರುದ್ಯೋಗಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.
ಇದು ಕೈತುಂಬ ಸಂಬಳ,ನಿಯಮಿತ (permanent) ಉದ್ಯೋಗ ಮತ್ತು ಪ್ರಗತಿಯನ್ನು ಸಾಧಿಸಲು ಅವಕಾಶವನ್ನು ಒದಗಿಸುತ್ತದೆ.
ಈ ಅಂಕಣದಲ್ಲಿ ಉದೋಗದ ಅರ್ಹತೆ,ವಯೋಮಿತಿ,ಅರ್ಜಿ ವಿಧಾನ, ಆಯ್ಕೆ ಹೇಗೆ ಮತ್ತು ಸಂಬಳದ ವಿವರಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ನೋಡೋಣ. ಬನ್ನಿ….
Table of Contents
Central Bank Of India – 2026 ನೇಮಕಾತಿಯ ಮುಖ್ಯಾಂಶಗಳು
🙋 ಒಟ್ಟು ಹುದ್ದೆಗಳು-350
🇮🇳 ಎಲ್ಲಿ ಕೆಲಸ- ಭಾರತದಾದ್ಯಂತ
🏦 ಉದ್ಯೋಗ ಸ್ಥಿತಿ- ಸರ್ಕಾರಿ ಬ್ಯಾಂಕ್ ಉದೋಗ
🛜 ಅರ್ಜಿ ವಿಧಾನ- ಆನ್ಲೈನ್(Online) ಮೂಲಕ
📅 ನೇಮಕಾತಿ ವರ್ಷ (Year)- 2026
Central Bank Of India ಹುದ್ದೆಗಳ ಬಗ್ಗೆ ಮಾಹಿತಿ (vacancy Details)
ಈ ಕೆಳಗಿನ ಹುದ್ದೆಗಳಿಗೆ ಅನುಗುಣವಾಗಿ ಸ್ಥಾನಗಳನ್ನು ಮೀಸಲಿಟ್ಟಿದೆ:
| ಹುದ್ದೆ | ಹುದ್ದೆಗಳ ಸಂಖ್ಯೆ |
| ಫಾರಿನ್ ಎಕ್ಸ್ಚೇಂಜ್ ಆಫೀಸರ್ | 50 |
| ಮಾರ್ಕೆಟಿಂಗ್ ಆಫೀಸರ್ | 300 |
| ಒಟ್ಟು | 350 |
ಈ ಹುದ್ದೆಗಳಿಗೆ ಭಾರದಾದ್ಯಂತ ಇರುವ ವಿವಿಧ ಶಾಖೆಗಳಲ್ಲಿ ನಿಯೋಜನೆಗೊಂಡಿವೆ, ಅಭ್ಯರ್ಥಿಗಳು ದೇಶದ ಯಾವುದೇ ರಾಜ್ಯದಲ್ಲಿ ಕೆಲಸ ನಿರ್ವಹಿಸಲು ಸಿದ್ಧರಾಗಿರಬೇಕು.
ಶೈಕ್ಷಣಿಕ ಅರ್ಹತೆ (Educational Qualification)
ಹುದ್ದೆಗೆ ಅನುಗುಣವಾಗಿ ವಿದ್ಯಾರ್ಹತೆ ಹೀಗಿದೆ:
ಫಾರಿನ್ ಎಕ್ಸ್ಚೇಂಜ್ ಆಫೀಸರ್(Foreign Exchange Officer)
ಈ ಹುದ್ದೆಗೆ ಕೆಳಗಿನ ಅರ್ಹತೆಗಳನ್ನು ಹೊಂದಿರಲೇಬೇಕು:
- ಮಾನ್ಯತೆ ಪಡೆದ ಯಾವುದಾದರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರಬೇಕು.
- CFA / CA
- ಎಂಬಿಎ (MBA – Finance / Banking / International Business)
ಮಾರ್ಕೆಟಿಂಗ್ ಆಫೀಸರ್ (Marketing Officer)
- ಮಾನ್ಯತೆ ಪಡೆದ ಯಾವುದಾದರು ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರಬೇಕು.
- ಎಂಬಿಎ (MBA – Marketing / management)
- PGDBM /PGDM
ಮೇಲೆ ಇರುವ ಸಂಬಂಧಿತ ವಿಷಯಗಳಲ್ಲಿ ಪದವಿ ಪಡೆದಿರುವವರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
ವಯೋಮಿತಿ (Age Limit)
ಅಭ್ಯರ್ಥಿಗಳ ವಯಸ್ಸು 01/01/2026ಕ್ಕೆ ಅನ್ವಯಿಸುವಂತೆ.
| ಹುದ್ದೆ | ಕನಿಷ್ಠ ವಯೋಮಿತಿ | ಗರಿಷ್ಠ ವಯೋಮಿತಿ |
| ಫಾರಿನ್ ಎಕ್ಸ್ಚೇಂಜ್ ಆಫೀಸರ್ (Foreign Exchange Officer) | 25 ವರ್ಷ | 35 ವರ್ಷ |
| ಮಾರ್ಕೆಟಿಂಗ್ ಆಫೀಸರ್ (Marketing Officer) | 22 ವರ್ಷ | 30 ವರ್ಷ |
ವಯೋಮಿತಿ ಸಡಿಲಿಕೆ (Age Relaxation)
ಸರಕಾರದ ನಿಯಮಗಳಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ:
- SC / ST ಅಭ್ಯರ್ಥಿಗಳಿಗೆ – 5 ವರ್ಷ
- OBC ಅಭ್ಯರ್ಥಿಗಳಿಗೆ – 3 ವರ್ಷ
- PwBD ಅಭ್ಯರ್ಥಿಗಳಿಗೆ – 10 ವರ್ಷ
- ಮಾಜಿ ಸೈನಿಕರಿಗೆ – ನಿಯಮಾನುಸಾರ
ವೇತನ ಜೊತೆಗೆ ಭತ್ಯೆಗಳು (Salary & Allowances)
ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ಸಂಬಳ ಜೊತೆಗೆ ಭತ್ಯೆಗಳನ್ನು ನೀಡಲಾಗುತ್ತದೆ.
ಅಂದಾಜು ವೇತನ :
- ಮೂಲ ಸಂಬಳ: ₹40,000 – ₹60,000 (ಹುದ್ದೆಯ ಅನುಸಾರ)
- DA, HRA, TA ಸೌಲಭ್ಯಗಳು
- ವೈದ್ಯಕೀಯ ವೆಚ್ಚದ ಸೌಲಭ್ಯಗಳು
- ಪಿಂಚಣಿ ಸೌಲಭ್ಯ
- ವಾರ್ಷಿಕ ಪ್ರೋತ್ಸಾಹ ಧನ (Incentive)
ಒಟ್ಟು ಒಂದು ತಿಂಗಳ ವೇತನ ₹55,000 ರಿಂದ ₹80,000 ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ.
(ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 : ಕಿರಿಯ ಸಹಾಯಕರು ಹಾಗೂ ಚಾಲಕ ಕಂ ಅಟೆಂಡರ್ ಹುದ್ದೆಗಳು)
ಅರ್ಜಿ ಸಲ್ಲಿಸುವ ವಿಧಾನ (How To Apply)
ಅಭ್ಯರ್ಥಿಗಳು ಅಧಿಕೃತ ಮಾಹಿತಿಯನ್ನು ಓದಿಕೊಂಡು ಪೂರ್ಣವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
ಅರ್ಜಿ ಸಲ್ಲಿಸುವ ಮುಖ್ಯ ಭಾಗಗಳು:
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ (Website) ಭೇಟಿ ನೀಡಿ.
- Recruitment ಭಾಗವನ್ನು ತೆರೆಯಿರಿ.
- ನೋಂದಣಿ (Register) ಮಾಡಿಕೊಳ್ಳಿ.
- ಲಾಗಿನ್ (Login) ಆಗಿ, ಪೂರ್ಣವಾಗಿ ಮತ್ತು ಸರಿಯಾಗಿ ಅರ್ಜಿಯನ್ನು ಭರ್ತಿ ಮಾಡಿ.
- ಅಗತ್ಯವಿರುವ ದಾಖಲೆ (Certificates) ಗಳನ್ನು ಅಪ್ಲೋಡ್ ಮಾಡಬೇಕು.
- ಶುಲ್ಕವನ್ನು ಪಾವತಿಸಿ.
- ಕೊನೆಯದಾಗಿ Submit ಮಾಡಿ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಶುಲ್ಕ (Application Fees)
- ಅಭ್ಯರ್ಥಿಗಳು General /OBC / EWS ಆಗಿದ್ದರೆ, ಅಂತವರಿಗೆ- ₹800
- ಅಭ್ಯರ್ಥಿಗಳು SC / ST / PwBD ಆಗಿದ್ದರೆ, ಅಂತವರಿಗೆ – ₹400
(ಅರ್ಜಿ ಶುಲ್ಕವು ಅಧಿಕೃತ ಅಧಿಸೂಚನೆಯ ಪ್ರಕಾರ ಬದಲಾಗುವ ಸಾಧ್ಯತೆ ಇದೆ)
ಅಗತ್ಯವಿರುವ ದಾಖಲೆಗಳು (Required Certificate)
ಅರ್ಜಿ ಹಾಕುವ ಮುನ್ನ ಈ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ:
- SSLC / PUC / Degree ಪ್ರಮಾಣಪತ್ರಗಳು (Scanned Copies)
- ಫೋಟೋ ಮತ್ತು ಸಹಿ (Scan Copy)
- ಆಧಾರ್ ಕಾರ್ಡ್ / ID Proof
- ಜಾತಿ ಪ್ರಮಾಣಪತ್ರ (Caste Certificate)
- ಅನುಭವ ಪ್ರಮಾಣಪತ್ರ (Experience letter)
ಆಯ್ಕೆ ಪ್ರಕ್ರಿಯೆ ಹೇಗೆ? (Selection Process)
ಅಭ್ಯರ್ಥಿಗಳನ್ನು ಈ ಕೆಳಗಿನ ಆಯ್ಕೆಯ ಪ್ರಕ್ರಿಯೆಗಳ ಮೂಲಕ ನಡೆಯುತ್ತದೆ:
ಲಿಖಿತ ಪರೀಕ್ಷೆ (Written Test)
- ಸಾಮಾನ್ಯ ಅಧ್ಯಯನ (General Knowledge)
- ಬ್ಯಾಂಕಿಂಗ್ ಜಾಗೃತಿ (banking Awareness)
- ಇಂಗ್ಲಿಷ್ ವಿಷಯ (English Langauge)
- ತಾರ್ಕಿಕ ವಿಷಯ (Reasoning)
- ವೃತ್ತಿಪರ ಜ್ಞಾನ (Professional Knowledge)
ಸಂದರ್ಶನ (Interview)
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯುತ್ತಾರೆ.
ದಾಖಲೆಗಳ ಪರಿಶೀಲನೆ (Document Verification)
ಸಂದರ್ಶನದಲ್ಲೂ ಉತ್ತೀರ್ಣರಾದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ ಅಂತಿಮವಾಗಿ ಕೊನೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ತಯಾರಿಸುತ್ತಾರೆ.
ಅಂತಿಮ ಆಯ್ಕೆ ಹೇಗಿರುತ್ತದೆ?
ಆಭರ್ತಿಗಳು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸಿದ ಅಂಕಗಳ ಅಧರದ ಮೇಲೆ (Merit Based) ಅಂತಿಮ ಆಯ್ಕೆ ನಡೆಯುತ್ತದೆ.
ಪರೀಕ್ಷೆಗೆ ನಿಮ್ಮ ತಯಾರಿ ಹೇಗಿರಬೇಕು?
- ದಿನಕ್ಕೆ ಕನಿಷ್ಠ ಅಂದರೂ 6-8 ಗಂಟೆ ಅಧ್ಯನಕ್ಕೆ ಮೀಸಲಿಡಿ.
- ಕಳೆದ ವರ್ಷದ ಅಥವಾ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ.
- ದಿನ ಪತ್ರಿಕೆ (News Paper) ಓದಿ ಮುಖ್ಯವಾಗಿ ಬ್ಯಾಂಕಿಂಗ್ ನ್ಯೂಸ್ ನ್ನು ನೋಟ್ ಮಾಡಿಟ್ಟುಕೊಳ್ಳಿ.
- ಅಣುಕು ಪರೀಕ್ಷೆ (Mock Test) ಬರೆಯಿರಿ.
- ಇಂಗ್ಲಿಷ್ ವಿಷಯದ ಬಗ್ಗೆ ಆಳವಾಗಿ ಅಧ್ಯನ ಮಾಡಿ.(ಮುಖ್ಯವಾಗಿ).
- ಗಣಿತದ ಸಮಸ್ಯೆಗಳು (Mathematical Problems) ಅನ್ನು ಸಾಧ್ಯವಾದಷ್ಟು ಹೆಚ್ಚು ಬಿಡಿಸಿ.
ಬ್ಯಾಂಕಿಂಗ್ ಉದ್ಯೋಗದ ಮುಖ್ಯ ಲಾಭಗಳು

✔️ಸರ್ಕಾರಿ ಉದ್ಯೋಗದ (Permanent Job) ಭದ್ರತೆ.
✔️ಕೈತುಂಬ ಸಂಬಳ.
✔️ಅತಿ ಕಡಿಮೆ ಸಮಯದಲ್ಲಿ ಪ್ರಮೋಷನ್.
✔️ದೇಶದ ಯಾವುದೇ ಭಾಗದಲ್ಲಿ ಕೆಲಸ.
✔️ಸಮಾಜದಲ್ಲಿ ಗೌರವ ಹೆಚ್ಚಳ.
✔️ನಿವೃತ್ತಿಯಾದ ನಂತರ ಪಿಂಚಣಿ (Pension) ಸೌಲಭ್ಯ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ:
🟢ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
🔴ತಪ್ಪಾದ ಮಾಹಿತಿಯನ್ನು ಕೊಡಬೇಡಿ.
✋ಮುಂಚಿತವಾಗಿ ಅರ್ಜಿ ಹಾಕಿ ಕೊನೆಯ ದಿನಾಂಕದವರೆಗೆ ಕಾಯಬೇಡಿ.
🧾ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ಪ್ರಶ್ನೆ ೧: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಪ್ರಕಟಿಸಿದ ಇತ್ತೀಚಿನ ನೇಮಕಾತಿ ಯಾವುದು?
ಫಾರಿನ್ ಎಕ್ಸ್ಚೇಂಜ್ ಆಫೀಸರ್ (Foreign Exchange Officer), ಹಾಗು ಮಾರ್ಕೆಟಿಂಗ್ ಆಫೀಸರ್ (Marketing Officer) ಹುದ್ದೆಗಳ ನೇಮಕಾತಿ.
ಪ್ರಶ್ನೆ ೨: 10ನೇ ಅಥವಾ 12ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಇಲ್ಲ, ಕಡ್ಡಾಯವಾಗಿ ಪದವಿ ಪಡೆದಿರಲೇಬೇಕು.
ಪ್ರಶ್ನೆ ೩: ಆನ್ಲೈನ್ ಅರ್ಜಿ ಪ್ರಕ್ರಿಯೆ ಇದೆಯೇ?
ಹೌದು, ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
ಪ್ರಶ್ನೆ ೪: ಎಲ್ಲಾ ಹುದ್ದೆಗಳಿಗೂ ಅನುಭವ ಅಗತ್ಯವಿದೆಯೇ?
ಇಲ್ಲ, ಯಾವುದೇ ಅನುಭವ ಬೇಕಾಗಿಲ್ಲ.
ಪ್ರಶ್ನೆ ೫: ಈ ನೇಮಕಾತಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಘೋಷಿಸಿದೆಯೇ?
ಹೌದು,
ಕೊನೆಯ ಮಾತು
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank Of India Recruitment- 2026) ನೇಮಕಾತಿ -2026 ಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಶಸ್ವಿಯಾಗಲು ಬಯಸುತ್ತಿರುವ ಎಷ್ಟೋ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.ನೀವು ಆರ್ಥಿಕ ಕ್ಷೇತ್ರ,ಮಾರ್ಕೆಟಿಂಗ್ ಅಥವಾ ಹಣಕಾಸು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದರೇ ಈ ಸುವರ್ಣಾವಕಾಶವನ್ನು ತಪ್ಪಿಸಿಕೊಳ್ಳಬೇಡಿ.
ಕೊನೆಯ ದಿನಾಂಕದವರೆಗೆ ಕಾಯದೆ ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯವನ್ನು ಸುಭದ್ರಗೊಳಿಸಿ.

Prathwiraj Chanapannavar is a passionate blogger and digital content writer with over 3 years of experience in blog writing. He specializes in creating simple, informative, and useful articles about government schemes, agriculture, technology, and daily life topics. Through his blog, he aims to provide clear and reliable information that helps readers stay updated with the latest news, opportunities, and useful guides. His writing style focuses on easy-to-understand language so that everyone can benefit from the information.