ಶಿಮುಲ್ ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ – ಶಿಮುಲ್ ನೇಮಕಾತಿ 2026 ಸಹಾಯಕ ವ್ಯವಸ್ಥಾಪಕ , ಕಿರಿಯ ತಾಂತ್ರಿಕ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ.
ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟವಾದ SHIMUL, ಇದು ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ (KMF) ಯ ಅಂಗ ಸಂಸ್ಥೆಯಾಗಿದ್ದು, ಈಗ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ.
ಈ ಹುದ್ದೆಗಳ ಕುರಿತು ಅಧಿಸೂಚನೆ ಕಳೆದ ವರ್ಷವೇ ಪ್ರಕಟವಾಗಿದ್ದರೂ, ಸರ್ಕಾರವು ಅಭ್ಯರ್ಥಿಗಳಿಗೆ ಒಮ್ಮೆ ಮಾತ್ರ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಿರುವುದರಿಂದ ಹೊಸದಾಗಿ ಅರ್ಹರಾಗಿರುವವರಿಗೆ ಮತ್ತಷ್ಟು ಅವಕಾಶ ಕಲ್ಪಿಸಲಾಗಿದೆ.
ಇದಕ್ಕೂ ಜೊತೆಗೆ SC ಒಳಮಿಸಲಾತಿ, ಜಾತಿ ಪ್ರಮಾಣಪತ್ರ ಹಾಗೂ ಇತರ ದಾಖಲೆಗಳ ಸಮಸ್ಯೆಯಿಂದ ಅರ್ಜಿ ತಿರಸ್ಕೃತವಾಗಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಸರಿಪಡಿಸಿ ಮರುಪರಿಶೀಲನೆಗಾಗಿ ಸಲ್ಲಿಸಲು ಸೂಚಿಸಲಾಗಿದೆ.
ಒಟ್ಟು 194 ಖಾಯಂ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 21ರವರೆಗೆ ವಿಸ್ತರಿಸಲಾಗಿದೆ.
ಈ ನೇಮಕಾತಿಯ ಕುರಿತು ಹೆಚ್ಚಿನ ವಿವರಗಳನ್ನು ಮುಂದೆ ತಿಳಿದುಕೊಳ್ಳೋಣ.
Table of Contents
🧠ಶಿಮುಲ್ ನೇಮಕಾತಿ 2026: ಮಾಹಿತಿ
| ನೇಮಕಾತಿ ವಿವರ | ಮಾಹಿತಿ |
| ಸಂಸ್ಥೆಯ ಹೆಸರು | KMF , SHIMUL |
| ಒಟ್ಟು ಹುದ್ದೆಗಳು | 194 |
| ಉದ್ಯೋಗದ ಸ್ಥಳ | ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ |
| ಹುದ್ದೆಗಳ ಹೆಸರು | ಸಹಾಯಕ ವ್ಯವಸ್ಥಾಪಕ , ಕಿರಿಯ ತಾಂತ್ರಿಕ ಮತ್ತು ಹಲವು |
📋ಶಿಮುಲ್ ನೇಮಕಾತಿ 2026 :ಹುದ್ದೆಗಳ ಮಾಹಿತಿ
| ಹುದ್ದೆ | ಸಂಖ್ಯೆ |
| ಸಹಾಯಕ ವ್ಯವಸ್ಥಾಪಕ | 20 |
| ಕೆಮಿಸ್ಟ್ (ಗ್ರೇಡ್-2) | 28 |
| ಜೂನಿಯರ್ ಟೆಕ್ನೀಷಿಯನ್ | 50 |
| ಟೆಕ್ನಿಕಲ್ ಆಫೀಸರ್ | 14 |
| ಕೆಮಿಸ್ಟ್ (ಗ್ರೇಡ್-1) | 4 |
| ವಿಸ್ತರಣಾಧಿಕಾರಿ (ದರ್ಜೆ-3) | 17 |
| ಲೆಕ್ಕ ಸಹಾಯಕ (ದರ್ಜೆ-2) | 12 |
| ಮಾರುಕಟ್ಟೆ ಸಹಾಯಕ | 10 |
| ಅಡ್ಮಿನಿಸ್ಟ್ರೇಟ್ ಅಸಿಸ್ಟೆಂಟ್ (ದರ್ಜೆ- 2) | 17 |
| ಒಟ್ಟು | 194 |

🎓 ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಯೋಗ್ಯತೆ
ಕಲಿಕಾ ಅರ್ಹತೆ:
ಶಿಮುಲ್ ನೇಮಕಾತಿ 2026 ಅಧಿಕೃತ ಅಧಿಸೂಚನೆಯ ಪ್ರಕಾರ ಆಯಾ ಹುದ್ದೆಗಳಿಗೆ ಅನುಗುಣವಾಗಿ ಪದವಿಯನ್ನು ಮಾನ್ಯತೆ ಪಡೆದ ಕಾಲೇಜಿನಲ್ಲಿ ಪೂರ್ಣಗೊಳಿಸಿರಬೇಕು. ಪಶು ವೈದ್ಯಕೀಯ ವಿಜ್ಞಾನ ಹಾಗು ಪಶು ಸಂಗೋಪನೆ ವಿಷಯದಲ್ಲಿ ಪದವಿ ಪಡೆದಿರಬೇಕು. ಪ್ರಮುಖವಾಗಿ ಯಾವ ಪದವಿಗಳು ಬೇಕೆ೦ಬುದನ್ನು ಕೆಳಗೆ ನೀಡಿದೆ:
🔹SSLC: ತರಗತಿಯನ್ನು ಪಾಸಾಗಿರಬೇಕು.
🔹ಪದವಿ: B.Sc / BCom / BBA / BBM ಪದವೀಧರರು ಅರ್ಜಿ ಸಲ್ಲಿಸಬಹುದು.
🔹ಸ್ನಾತಕ್ಕೋತ್ತರ ಪದವಿ: MSc / MBA ಮುಗಿಸಿದವರು.
🔹ತಾಂತ್ರಿಕ ಶಿಕ್ಷಣ: BE / BTec ಪದವೀಧರರು.
🔹ವೃತ್ತಿಪರ ಪದವಿ: ಪಶು ವೈದ್ಯಕೀಯ ವಿಜ್ಞಾನ ಹಾಗು ಪಶು ಸಂಗೋಪನೆ (BVSc & AH) ಪಡೆದವರಿಗೆ ಆದ್ಯತೆ.
(ಸೂಚನೆ– ಎಲ್ಲ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯವಾಗಿದೆ. ಕಂಪ್ಯೂಟರ್ ಕೋರ್ಸ ಪೂರ್ಣಗೊಳಿಸಿದವರಿಗೆ ಹೆಚ್ಚಿನ ಆದ್ಯತೆ)
ಕಿರಿಯ ತಾಂತ್ರಿಕ ವಿಭಾಗದಲ್ಲಿ ಎಲೆಕ್ಟ್ರಿಷಿಯನ್,ಬಾಯ್ಲರ್, ವೆಲ್ಡರ್, ರೆಫ್ರಿಜರೇಷನ್ ಮತ್ತು ಫಿಟ್ಟರ್ ನಲ್ಲಿ SSLC ನಂತರ ITI ಮುಗಿಸಿದವರು ಅರ್ಜಿ ಸಲ್ಲಿಸಬಹುದು.
ವಯಸ್ಸು ಎಷ್ಟಿರಬೇಕು? (Age Limit)
ಎಲ್ಲ ಹುದ್ದೆಗಳಿಗೆ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಕಡ್ಡಾಯವಾಗಿದೆ. ಹಾಗು 35 ವರ್ಷ ಗರಿಷ್ಠ ವಯಸ್ಸಾಗಿದೆ.
ವಯೋ ಸಡಿಲಿಕೆ 👍
- SC / ST / CAT 1 – 5 ವರ್ಷ
- OBC – 3 ವರ್ಷ (2A,2B,3A,3B)
💰 ತಿಂಗಳ ಸಂಬಳ
ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಂಬಳದ ಜೊತೆ ಭತ್ಯೆಯೂ ಇರಲಿದೆ.
ವಿವಿಧ ಹುದ್ದೆಗಳ ಆಧಾರದ ಮೇಲೆ ತಿಂಗಳ ಸಂಬಳ ರೂ. 34,100 ರಿಂದ ರೂ.1,55,200 ರವರೆಗೆ.
🗓️ ಪ್ರಮುಖ ದಿನಾಂಕಗಳು
| ವಿವರ | ದಿನಾಂಕಗಳು |
| ಅಪ್ಲಿಕೇಶನ್ ಪ್ರಾರಂಭ | 06/02/2026 |
| ಅಪ್ಲಿಕೇಶನ್ ಕೊನೆಯ ದಿನಾಂಕ | 21/02/2026 |
ಕೇವಲ 15 ದಿನಗಳ ಕಾಲಾವಕಾಶ ಇರುವುದರಿಂದ ಅರ್ಹತೆ ಇರುವ ಅಭ್ಯರ್ಥಿಗಳು ಕೊನೆಯ ದಿನಾನಕದ ವರೆಗೆ ಕಾಯದೆ ತಕ್ಷಣವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
ಆಯ್ಕೆ ಪ್ರಕ್ರಿಯೆ
✅ಲಿಖಿತ ಪರೀಕ್ಷೆ (Merit List)
✅ಸಂದರ್ಶನ (Interview)
📝ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಶಿಮುಲ್ ನೇಮಕಾತಿ 2026 ಸಂಬಂಧಿಸಿದ ಅಧಿಕೃತ ಸೂಚನೆಯಂತೆ ಅಭ್ಯರ್ಥಿಗಳು ಅರ್ಜಿಯನ್ನು ಕೇವಲ ಆನ್ಲೈನ್ ವಿಧಾನದಲ್ಲಿ ಮಾತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕ್ರಮವನ್ನು ಕೆಳಗಿನಂತೆ ವಿವರಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಹಂತ 1:
ಮೊದಲು ಅಭ್ಯರ್ಥಿಗಳು ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅದರಲ್ಲಿರುವ ಸೂಚನೆಗಳನ್ನು ತಿಳಿದುಕೊಳ್ಳಬೇಕು.
ಹಂತ 2:
ನೀವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಗೆ ಅಗತ್ಯವಿರುವ ಅರ್ಹತೆಗಳನ್ನು ಹೊಂದಿದ್ದೀರಾ ಎಂಬುದನ್ನು ಪರಿಶೀಲಿಸಿ.
ಹಂತ 3:
ಅರ್ಜಿಯನ್ನು ತುಂಬುವಾಗ ಬಳಸಲು ಸಕ್ರಿಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಇರಬೇಕು.
ಹಂತ 4:
ಅರ್ಜಿಗೆ ಬೇಕಾಗುವ ಪ್ರಮುಖ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಿ:
- ಗುರುತಿನ ಚೀಟಿ (ಆಧಾರ್ ಕಾರ್ಡ್ / PAN ಕಾರ್ಡ್ / ಡ್ರೈವಿಂಗ್ ಲೈಸೆನ್ಸ್)
- ಶೈಕ್ಷಣಿಕ ಪ್ರಮಾಣಪತ್ರಗಳು (Degree / Marks Card)
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
ಹಂತ 5:
ನಂತರ ಶಿಮುಲ್ ಸಂಸ್ಥೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ – shimul.coop
ಹಂತ 6:
ಅಲ್ಲಿ ಇರುವ “Apply Online” ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 7:
ಅರ್ಜಿಯಲ್ಲಿ ಕೇಳಿರುವ ಮಾಹಿತಿಯನ್ನು ಸರಿಯಾಗಿ ಮತ್ತು ಪೂರ್ಣವಾಗಿ ಭರ್ತಿ ಮಾಡಿ.
ಹಂತ 8:
ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
ಹಂತ 9:
ಅಗತ್ಯವಿರುವ ಅರ್ಜಿ ಶುಲ್ಕವನ್ನು ಪಾವತಿಸಿ.
ಹಂತ 10:
ಕೊನೆಯಲ್ಲಿ Submit ಬಟನ್ ಒತ್ತಿ, ಅರ್ಜಿ ಸಂಖ್ಯೆಯನ್ನು ಭವಿಷ್ಯಕ್ಕಾಗಿ ದಾಖಲಿಸಿಕೊಂಡಿರಿ.
🧰ಮುಂದಿನ ಆಯ್ಕೆ ಹೇಗೆ?
ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿದ ನಂತರ ಅರ್ಹ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಕರೆಯುತ್ತಾರೆ, ನಂತರ ಲಿಖಿತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.
🌟ಈ ನೇಮಕಾತಿಯ ಲಾಭಗಳು
✔️ ರಾಜ್ಯದ ಉತ್ತಮ ಸಂಘದಲ್ಲಿ ಕೆಲಸ ಮಾಡುವ ಅವಕಾಶ
✔️ನಿಮ್ಮ ಸ್ಥಳೀಯವಾಗಿ ಉದ್ಯೋಗ ಮಾಡುವ ಅವಕಾಶ
✔️ಈ ಉದ್ಯೋಗದಿಂದ ನಿಮ್ಮ ಯೋಚನಾ ಶಕ್ತಿ, ಕೌಶಲ್ಯ ಹೆಚ್ಚಾಗಬಹುದು
✔ಸಮಾಜದಲ್ಲಿ ಉತ್ತಮ ಗೌರವ ಸಿಗಲಿದೆ.
✔ಸರಕಾರದ ಒಳ್ಳೆಯ ಸಂಬಳ ಸಿಗಲಿದೆ.
ಮುಖ್ಯವಾದ ಲಿಂಕ್ ಗಳು
- ಅಧಿಕೃತ ಅಧಿಸೂಚನೆ – ಶಿಮುಲ್ ನ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ.
- ಆನ್ಲೈನ್ ಅರ್ಜಿ –shimul.coop
- ಅಧಿಕೃತ ವೆಬ್ಸೈಟ್ – https://shimul.coop
💡ಕೊನೆಯ ಮಾತು
ಶಿಮುಲ್ ನೇಮಕಾತಿ 2026 ಅಡಿಯಲ್ಲಿ ಒಟ್ಟು 194 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಈಗ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶಿಮುಲ್ ಸಂಸ್ಥೆಯ ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದುವುದು ಅತ್ಯಂತ ಅಗತ್ಯ.
ಅರ್ಜಿಯಲ್ಲಿ ತಪ್ಪಾದ ಮಾಹಿತಿ ನೀಡಿದರೆ ಅಥವಾ ವಿವರಗಳನ್ನು ಸರಿಯಾಗಿ ನಮೂದಿಸದಿದ್ದರೆ ಅರ್ಜಿಯನ್ನು ತಿರಸ್ಕರಿಸುವ ಸಾಧ್ಯತೆ ಇದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಬಳಸಿಕೊಳ್ಳುವುದು ಉತ್ತಮ.
(C-DAC ನೇಮಕಾತಿ 2026 ಪ್ರಾಜೆಕ್ಟ್ ಎಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ)
ಸಾಮಾನ್ಯವಾಗಿ ಅಭ್ಯರ್ಥಿಗಳು ಕೇಳುವ ಪ್ರಶ್ನೆಗಳು
ಪ್ರಶ್ನೆ ೧ – ಅರ್ಜಿಯನ್ನು ಹೇಗೆ ಮತ್ತು ಎಲ್ಲಿ ಸಲ್ಲಿಸಬೇಕು?
ಉತ್ತರ- ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಶಿಮುಲ್ ನ ಅಧಿಕೃತ ಜಾಲತಾಣಕ್ಕೆ (www.shimul.coop) ಭೇಟಿ ನೀಡಿ ಸಲ್ಲಿಸತಕ್ಕದ್ದು.
ಪ್ರಶ್ನೆ ೨ – ಸಂಬಳ ಎಷ್ಟಿರುತ್ತದೆ?
ಉತ್ತರ: ರೂ. 34,100 ರಿಂದ ರೂ.1,55,200 ರವರೆಗೆ ಇರುತ್ತದೆ.
ಪ್ರಶ್ನೆ ೩ – ಕೆಲಸ ಎಲ್ಲಿ?
ಉತ್ತರ: ಶಿವಮೊಗ್ಗ,ದಾವಣಗೆರೆ ಹಾಗು ಚಿತ್ರದುರ್ಗ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟಗಳ ಸಂಘದಲ್ಲಿ.
ಪ್ರಶ್ನೆ ೪ – ಅರ್ಜಿ ಹಾಕಲು ವಯಸ್ಸಿನ ಮಿತಿ ಏನು?
ಉತ್ತರ: ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ (ವಯೋ ಸಡಿಲಿಕೆ ಇರಲಿದೆ)

Prathwiraj Chanapannavar is a passionate blogger and digital content writer with over 3 years of experience in blog writing. He specializes in creating simple, informative, and useful articles about government schemes, agriculture, technology, and daily life topics. Through his blog, he aims to provide clear and reliable information that helps readers stay updated with the latest news, opportunities, and useful guides. His writing style focuses on easy-to-understand language so that everyone can benefit from the information.