NIELIT ನೇಮಕಾತಿ 2026: ಕೇಂದ್ರ ಸರಕಾರದ ಸಂಸ್ಥೆಯಲ್ಲಿ SSLC ಪಾಸ್ ಆಗಿದ್ದರೆ ಸ್ಟಾಫ್ ಡ್ರೈವರ್ ಕೆಲಸದ ಅದ್ಭುತ ಅವಕಾಶ!
ಕೇಂದ್ರ ಸರಕಾರದ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಎಷ್ಟೋ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರದ ಸ್ಥಿರ ಹಾಗು ಗೌರವಾನ್ವಿತ ಉದ್ಯೋಗದ ಬಯಕೆ ಇದ್ದೇ ಇರುತ್ತದೆ. 2026 ರ ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಹೊಸ ಉದ್ಯೋಗದ ಭರವಸೆ ನೀಡಿದೆ. ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿರುವ ನೇಷನಲ್ ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ (National Institute Of Electronics & Information Technology) – NIELIT ಸಂಸ್ಥೆಯು ಸ್ಟಾಫ್ ಡ್ರೈವರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕೇವಲ SSLC ಪಾಸ್ ಆಗಿರುವ ಹಾಗು ಕಾರು ಚಲನೆಯಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು NIELIT ಅವಕಾಶ ಮಾಡಿಕೊಡಲಿದೆ.ಈ ಹುದ್ದೆಯ ಪ್ರಮುಖ ವಿಶೇಷಗಳೇನೆಂದರೆ ಅಭ್ಯರ್ಥಿಗಳಿಗೆ ಉತ್ತಮ ಸಂಬಳ, ನಿಯಮಿತ ಉದ್ಯೋಗ(Permanent Job), ಪಿಂಚಣಿ ಸೌಲಭ್ಯಗಳು(Pension) ಹಾಗು ಇತರೆ ಸರ್ಕಾರಿ ಭತ್ಯೆಗಳು. ಈ ಅಂಕಣದಲ್ಲಿ NIELIT Recruitment 2026 ರ ಬಗ್ಗೆ ಪೂರ್ಣ ಮಾಹಿತಿಯನ್ನು ಸರಳವಾಗಿ ಮತ್ತು ವಿವರವಾಗಿ ನೋಡೋಣ.
Table of Contents
NIELIT ಸಂಸ್ಥೆಯ ಬಗ್ಗೆ ಕಿರು ಪರಿಚಯ
NIELIT ಸಂಸ್ಥೆಯು ದೇಶದ ಒಂದು ಉತ್ತಮ ಮತ್ತು ಪ್ರಮುಖ ಸಂಸ್ಥೆಯಾಗಿದೆ. ಇದು ಮಾಹಿತಿ ತಂತ್ರಜ್ಞಾನ,ಎಲೆಕ್ಟ್ರಾನಿಕ್ಸ್ ಮತ್ತು ಡಿಜಿಟಲ್ ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ತಾಂತ್ರಿಕ ಬೆಂಬಲ ಹಾಗು ತರಬೇತಿಯನ್ನು ಸರಕಾರದ ವಿವಿಧ ಇಲಾಖೆಗಳಿಗೆ ನೀಡುವ ಈ ಸಂಸ್ಥೆ ಕಾಲ ಕಾಲಕ್ಕೆ ಉದ್ಯೋಗಾವಕಾಶಗಳನ್ನು ಹೊರಡಿಸುತ್ತದೆ. ಕಡಿಮೆ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ಸ್ಟಾಫ್ ಕಾರ್ ಡ್ರೈವರ್ ನೇಮಕಾತಿಯು 2026 ರಲ್ಲಿನ ಒಂದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ಬಗ್ಗೆ ಮಾಹಿತಿ
| ವಿವರ | ಮಾಹಿತಿ |
| ಸಂಸ್ಥೆ | NIELIT |
| ಹುದ್ದೆ ಯಾವುದು | ಸ್ಟಾಫ್ ಕಾರ್ ಡ್ರೈವರ್ |
| ಎಷ್ಟು ಹುದ್ದೆಗಳು | 4 |
| ಉದ್ಯೋಗ ಸ್ಥಳ | ಬೆಂಗಳೂರು,ಚೆನ್ನೈ,ತಿರುವನಂತಪುರಂ,ಮುಂಬೈ |
| ಅರ್ಜಿ ವಿಧಾನ | ಆನ್ಲೈನ್ |

ವಲಯವಾರು ಹಂಚಿಕೆ
- ದಕ್ಷಿಣ ವಲಯ (ಬೆಂಗಳೂರು,ಚೆನ್ನೈ,ತೀರ್ವಾನಂತಪುರಂ)- 3 ಹುದ್ದೆಗಳ 1
- ಪಶ್ಚಿಮ ವಲಯ (ಮುಂಬೈ)- 1 ಹುದ್ದೆ (EWS ಕೆಟಗರಿ)
ಅರ್ಹತೆಗಳು
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು ಕೆಳಗಿನಂತಿವೆ:
ಶೈಕ್ಷಣಿಕ ಅರ್ಹತೆಗಳು
ಮಾನ್ಯತೆ ಪಡೆದ ಮಂಡಳಿಯಿಂದ (Board) SSLC ಯಲ್ಲಿ ಉತ್ತೀರ್ಣರಾಗಿರಬೇಕು.
ತಾಂತ್ರಿಕ (Technical) ಅರ್ಹತೆ
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ (LMV License) ಹೊಂದಿರಬೇಕು.
- ಕನಿಷ್ಠ 3 ವರ್ಷಗಳ ಕಾರು ಚಾಲನೆ ಮಾಡಿದ ಅನುಭವ ಇರಬೇಕು.
ವಿಶೇಷ ಆದ್ಯತೆ
ನಾಗರಿಕ ಸ್ವಯಂಸೇವಕರಾಗಿ ಅಥವಾ ಹೋಂ ಗಾರ್ಡ್ ಆಗಿ ಅಭ್ಯರ್ಥಿಗಳು 3 ವರ್ಷ ಸೇವೆ ಸಲ್ಲಿಸಿದ್ದಾರೆ ಅಂತವರಿಗೆ ಹೆಚ್ಚಿನ ಆದ್ಯತೆ.
ವಯೋಮಿತಿ (Age Limit)
| ವಯಸ್ಸು | ವಯೋಮಿತಿ |
| ಕನಿಷ್ಠ ವಯಸ್ಸು | 18 ವರ್ಷ |
| ಗರಿಷ್ಠ ವಯಸ್ಸು | 25 ವರ್ಷ |
26-02-2026 ಕ್ಕೆ ಅನುಗುಣವಾಗಿ ಅಭ್ಯರ್ತಿಗಳ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ.
(Central ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಲ್ಲಿ ಭರ್ಜರಿ ನೇಮಕಾತಿ)
ವಯಸ್ಸಿನ ಸಡಿಲಿಕೆ
- ಸರ್ಕಾರಿ ನಿಯಮಗಳ ಪ್ರಕಾರ ಮಾಜಿ ಸೈನಿಕರಿಗೆ ವಯೋಮಿತಿ ಸಡಿಲಿಕೆ ಇದೆ.
- ಕೇಂದ್ರ ಸರಕಾರದ ನೌಕರಿಗೆ ಗರಿಷ್ಠ 40 ವರ್ಷದವರೆಗೆ ಸಡಿಲಿಕೆ ಇದೆ.
ವೇತನ ಮತ್ತು ಭತ್ಯೆಗಳು
ಖುಷಿಯ ವಿಷಯವೇನೆಂದರೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರದ 7ನೇ ವೇತನ ಆಯೋಗದ ಪ್ರಕಾರ ಸಂಬಳ ನೀಡಲಾಗುತ್ತದೆ.
ವೇತನ
| ವಿವರ | ವೇತನ |
| ವೇತನ ಹಂತ | Level -2 |
| ತಿಂಗಳ ವೇತನ | ರೂ.19,900 ರಿಂದ ರೂ. 63,200 |
| ಇತರೆ ಭತ್ಯೆ | DA , HRA , TA ಮುಂತಾದವುಗಳು. |
ಈ ಸಂಬಳದ ಜೊತೆಗೆ ನಿವೃತ್ತಿ ನಂತರದ ವೇತನ (Pension), ವೈದ್ಯಕೀಯ ಭದ್ರತೆ ಮತ್ತಿತರ ಭತ್ಯೆಗಳ ಸಿಗುತ್ತವೆ.
ಅರ್ಜಿ ಶುಲ್ಕದ ವಿವರ
| ವರ್ಗ | ಶುಲ್ಕ |
| SC / ST / ಮಹಿಳೆಯರು | ಉಚಿತ (Free) |
| ಸಾಮಾನ್ಯ / OBC / ಇತರೆ ವರ್ಗದವರು | ರೂ.300 |
ಅಭ್ಯರ್ಥಿಗಳು ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸತಕ್ಕದ್ದು.
ಅರ್ಜಿ ಸಲ್ಲಿಸುವ ಬಗ್ಗೆ ವಿವರ
ಅಭ್ಯರ್ಥಿಗಳು ಈ ಕೆಳಗಿನ ಹಂತಗಳಂತೆ ಅರ್ಜಿ ಸಲ್ಲಿಸಬೇಕು.
🌐 ಅಧಿಕೃತ ಜಾಲತಾಣವನ್ನು (Website) ತೆರೆಯಿರಿ.
🏢. ”Recruitment 2026” ನ ವಿಭಾಗವನ್ನು ಒತ್ತಿರಿ.
📮 ಇಮೇಲ್ ಮತ್ತು ಮೊಬೈಲ್ ನಂಬರ್ ಹಾಕಿ ಹೊಸ ನೋಂದಣಿ (New Registration) ಮಾಡಿಕೊಳ್ಳಿ.
🈸 ಸಂಪೂರ್ಣ ಅರ್ಜಿಯನ್ನು ಭರ್ತಿ ಮಾಡಿ.
📑 ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
📷 ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
🏧 ಅರ್ಜಿ ಶುಲ್ಕ ಪಾವತಿಸಿ.
✅ submit ಮಾಡಿ ಅರ್ಜಿ ಪ್ರಿಂಟ್ ತೆಗೆದುಕೊಳ್ಳಿ.
ಅಗತ್ಯವಿರುವ ದಾಖಲೆಗಳು
- SSLC ಪ್ರಮಾಣ ಪತ್ರ
- ಚಾಲನಾ ಪರವಾನಗಿ (Driving License)
- ಪಾಸ್ಪೋರ್ಟ್ ಸೈಜ್ ಫೋಟೋ
- ಅನುಭವ ಪ್ರಮಾಣಪತ್ರ (Experience Certificate)
- ಜಾತಿ ಪ್ರಮಾಣಪತ್ರ (Caste Certificate)
ಆಯ್ಕೆ ಹೇಗೆ?
ಅಭ್ಯರ್ಥಿಗಳನ್ನು ಎರಡು ಹಂತಗಳಲ್ಲಿ NIELIT ಈ ನೇಮಕಾತಿಗಾಗಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತ ಲಿಖಿತ ಪರೀಕ್ಷೆ
- ಒಟ್ಟು ಅಂಕಗಳು: 120
- ಪರೀಕ್ಷೆ ಹೇಗೆ: ವಸ್ತುನಿಷ್ಠ ಪ್ರಶ್ನೆಗಳು (Objective Type)
- ನೆಗೆಟಿವ್ ಅಂಕಗಳು: ಇಲ್ಲ.
ವಿಷಯಗಳು ಏನೇನು?
- ಸಾಮಾನ್ಯ ಅಧ್ಯಯನ
- ಗಣಿತ ವಿಷಯ
- ಭಾಷಾ ಜ್ಞಾನ
- ರಸ್ತೆಯ ನಿಯಮಗಳು (Traffic rules)
- ಕಾರು ನಿರ್ವಹಣೆ (car maintenance)
ಚಾಲನಾ ಕೌಶಲ್ಯದ ಪರೀಕ್ಷೆ
- ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಪಾಸಾದರೆ ಮಾತ್ರ.
- ನಡೆಯುವ ಸ್ಥಳ: ದೆಹಲಿ.
ಲಿಖಿತ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳ ಆದಾರದ ಮೇಲೆ ಅಂತಿಮ ಆಯ್ಕೆ ನಡೆಯುತ್ತದೆ.
ಪ್ರಮುಖ ದಿನಾಂಕಗಳು
| ಹಂತಗಳು | ದಿನಾಂಕಗಳು |
| ಅರ್ಜಿ ಪ್ರಾರಂಭ | 28-01-2026 |
| ಅರ್ಜಿ ಮುಕ್ತಾಯ | 26-02-2026 |
| ಶುಲ್ಕ ಕಟ್ಟುವ ಕೊನೆ ದಿನಾಂಕ | 26-02-2026 |
| ಪರೀಕ್ಷೆ | ನಂತರ ಸೂಚನೆ |
ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಗಳು (FAQs)
ಪ್ರಶ್ನೆ ೧. 12ನೇ ತರಗತಿ ಫೈಲಾದವರು ಅರ್ಜಿ ಹಾಕಬಹುದೇ?
ಹೌದು. 10ನೇ ತರಗತಿ ಪಾಸಾಗಿದ್ದರೆ ಸಾಕು.
ಪ್ರಶ್ನೆ ೨. ಮಹಿಳೆಯರು ಅರ್ಜಿ ಹಾಕಬಹುದೇ?
ಹೌದು. ಮಹಿಳೆಯರಿಗೆ ಯಾವುದೇ ಶುಲ್ಕ ಇಲ್ಲ.
ಪ್ರಶ್ನೆ ೩. ಪರೀಕ್ಷೆಯಲ್ಲಿ ನೆಗೆಟಿವ್ ಅಂಕಗಳು ಇರುತ್ತದೆಯೇ?
ಯಾವುದೇ ನೆಗೆಟಿವ್ ಅಂಕ ಇರುವುದಿಲ್ಲ .
ಪ್ರಶ್ನೆ ೪. ಅನುಭವ ಕಡ್ಡಾಯವೇ?
ಹೌದು, ಕನಿಷ್ಠ 3 ವರ್ಷ ಕಾರು ಚಲನೆಯಲ್ಲಿ ಅನುಭವ ಕಡ್ಡಾಯ.
ಪ್ರಶ್ನೆ ೫. ಚಾಲನಾ ಕೌಶಲ್ಯ ಪರೀಕ್ಷೆ ಎಲ್ಲಿ ನಡೆಯುತ್ತದೆ?
ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯಲಿದೆ.
ಈ ಉದ್ಯೋಗದ ಮುಖ್ಯ ಲಾಭಗಳು
✈️ ಕೇಂದ್ರಸರಕಾರದ ನೌಕರಿ
☮️ ಶಾಶ್ವತ ಉದ್ಯೋಗದ ಖಾತರಿ (Permanent Job)
💰 ಅತ್ಯುತ್ತಮ ಸಂಬಳ
🧓 ಪಿಂಚಣಿ ಸೌಲಭ್ಯ
💪 ಸಾಮಾಜಿಕ ಗೌರವ
⏮️ ಉತ್ತಮ ಪ್ರಗತಿಗೆ ಅವಕಾಶ
ಅಂತಿಮ ಮಾತು
ಕಡಿಮೆ ವಿದ್ಯಾರ್ಹತೆ ಹೊಂದಿದವರಿಗೆ ಕೇಂದ್ರ ಸರಕಾರದ NILET Recruitment 2026 ಸ್ಟಾಫ್ ಕಾರ್ ಡ್ರೈವರ್ ಹುದ್ದೆ ಒಂದು ಉತ್ತಮ ಅವಕಾಶವಾಗಿದೆ. ನೀವು ಸಮಯ ವ್ಯರ್ಥ ಮಾಡದೆ, ನೀವು ಅರ್ಹರಾಗಿದ್ದಾರೆ ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಉದ್ಯೋಗವನ್ನು ಭದ್ರಪಡಿಸಿಕೊಳ್ಳಿ.
ಆಗಾಗ್ಗೆ ಅಧಿಕೃತ ಜಾಲತಾಣವನ್ನು ಪರಿಶೀಲಿಸಿ , ಯಾವುದೇ ತಪ್ಪು ಮಾಹಿತಿ ಮತ್ತು ತಪ್ಪು ಪ್ರಮಾಣಪತ್ರಗಳನ್ನು ನೀಡದೆ ಅರ್ಜಿ ಸಲ್ಲಿಸಿ.

Prathwiraj Chanapannavar is a passionate blogger and digital content writer with over 3 years of experience in blog writing. He specializes in creating simple, informative, and useful articles about government schemes, agriculture, technology, and daily life topics. Through his blog, he aims to provide clear and reliable information that helps readers stay updated with the latest news, opportunities, and useful guides. His writing style focuses on easy-to-understand language so that everyone can benefit from the information.