ನಿರುದ್ಯೋಗಿ ಯುವಕ, ಯುವತಿಯರಿಗೆ ಮತ್ತು ಅಭ್ಯರ್ಥಿಗಳಿಗೆ 2026ನೇ ವರ್ಷ ಉತ್ತಮ ಅವಕಾಶಗಳನ್ನು ತಂದಿದೆ./ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ಸಂಪೂರ್ಣ ಮಾಹಿತಿ ಬಗ್ಗೆ ಇಲ್ಲಿ ತಿಳಿಯೋಣ:
ಸಹಕಾರಿ ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ಅಭ್ಯರ್ಥಿಗಳಿಗೆ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ಒಂದು ಉತ್ತಮ ಅವಕಾಶವಾಗಿದೆ. ಎಷ್ಟೋ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ತುಂಬಾ ಇಷ್ಟ ಪಡುತ್ತಾರೆ ಏಕೆಂದರೆ ಸ್ಥಿರ ಉದ್ಯೋಗ, ಉತ್ತಮ ವೇತನ ಮತ್ತು ಸಮಾಜ ಸೇವೆಯ ಜೊತೆಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಆ ಅರ್ಹತೆ ಇರುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಈ ವಿವರಣೆಯಲ್ಲಿ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿಗೆ ಸಂಬಧಪಟ್ಟ ಅರ್ಹತೆ, ಹುದ್ದೆಗಳ ವಿವರ, ವೇತನ/salary , ಆಯ್ಕೆ ವಿಧಾನ , ಅರ್ಜಿ ಸಲ್ಲಿಸುವ ವಿಧಾನ ಹಾಗೂ ಕೆಲವು ಪ್ರಮುಖ ಸೂಚನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
Table of Contents

ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ಬಗ್ಗೆ ಮಾಹಿತಿ:
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ಒಂದು ನಂಬಿಕಸ್ಥ ಮತ್ತು ವಿಶ್ವಾಸರ್ಹ ಸಹಕಾರಿ ಹಣಕಾಸಿನ ಸಂಸ್ಥೆಯಾಗಿದ್ದು, ಗ್ರಾಹಕರಿಗೆ ಮತ್ತು ಸ್ಥಳೀಯ ಜನರಿಗೆ ಉತ್ತಮ ಬ್ಯಾಂಕಿಂಗ್ ಸೇವೆಗಳನ್ನು ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಂದರೆ 2026 ರಲ್ಲಿಯೂ ಬ್ಯಾಂಕ್ ತನ್ನ ವಿವಿಧ ಹುದ್ದೆಗಳಿಗಾಗಿ ನಿಯಮಿತ ಭರ್ತಿ ಮಾಡಿಕೊಳ್ಳುತ್ತಿದೆ.
ಹುದ್ದೆಯ ವಿವರಗಳು:
- ಕಿರಿಯ ಸಹಾಯಕರು
- ಚಾಲಕ ಕಂ ಅಟೆಂಡರ್
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ವಿವರಗಳು (Recruitment Details):
| ಸಂಸ್ಥೆಯ ಹೆಸರು | ಚಾರ್ಟರ್ಡ್ ಸಹಕಾರಿ ಬ್ಯಾಂಕ್ |
| ನೇಮಕಾತಿ ವರ್ಷ | 2026 |
| ಒಟ್ಟು ಹುದ್ದೆಗಳು | 09 |
| ಉದ್ಯೋಗದ ಪ್ರಕಾರ | ನಿಯಮಿತ (Permanent Job) |
| ಕೆಲಸದ ಸ್ಥಳ | ಕರ್ನಾಟಕ (ಸ್ಥಳಾನುಸಾರ ಬದಲಾಗಬಹುದು) |
| ಅರ್ಜಿಯ ವಿಧಾನ | ಆಫ್ಲೈನ್ (ಅಧಿಸೂಚನೆಯ ಪ್ರಕಾರ) |
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 ಖಾಲಿ ಇರುವ ಹುದ್ದೆಗಳ ಸಂಖ್ಯೆ:
ಒಟ್ಟು 09 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ಕಿರಿಯ ಸಹಾಯಕ | 07 |
| ಚಾಲಕ ಕಂ ಅಟೆಂಡರ್ | 02 |
ವಿದ್ಯಾರ್ಹತೆ (Qualification):
ಕಿರಿಯ ಸಹಾಯಕರು-
- ಈ ಹುದ್ದೆಗೆ ಯಾವುದೇ ವಿಶ್ವವಿದ್ಯಾಲಯದಲ್ಲಿ ( ಭಾರತದ ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾದ) ಯಾವುದೇ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ( ಪದವಿಯ ಎಲ್ಲ ವರ್ಷದ ಅಂಕಗಳು ಶೇ.60 ರಷ್ಟು ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು)
- ಅದರಲ್ಲೂ ಬಿ.ಕಾಮ್,ಎಂ.ಕಾಮ್,ಮತ್ತು ಎಂಬಿಎ(ಫೈನಾನ್ಸ್) ನಲ್ಲಿ ತೇರ್ಗಡೆಯಾದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
- ಕನ್ನಡವನ್ನು ಓದುವ,ಬರೆಯುವ,ಮಾತನಾಡುವ ಮತ್ತು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು.
ಚಾಲಕ ಕಂ ಅಟೆಂಡರ್–
- ಈ ಹುದ್ದೆಗೆ ಎಸ್.ಎಸ್.ಎಲ್.ಸಿ./10ನೇ ತರಗತಿಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕನ್ನಡವನ್ನು ಒಂದು ಭಾಷೆಯಾಗಿ ಓದಿರಬೇಕು.
- ಲಘು ಮೋಟಾರು ವಾಹನ (Heavy vehicle driving License) ಕಾನೂನು ಬದ್ಧವಾಗಿ ಹೊಂದಿರಬೇಕು.
ವೇತನ ಶ್ರೇಣಿ (Salary Details):
| ಹುದ್ದೆ | ವೇತನ |
| ಕಿರಿಯ ಸಹಾಯಕರು | ರೂ. 37,500/- – ರೂ. 76,100/- |
| ಚಾಲಕ ಕಂ ಅಟೆಂಡರ್ | ರೂ. 29,600/- – ರೂ. 52,800/- |
ವಯೋಮಿತಿ (Age Limit) :
ಅರ್ಜಿ ಸಲ್ಲಿಸುವ ದಿನಾಂಕಕ್ಕೆ ಸರಿಯಾಗಿ ಅಭ್ಯರ್ಥಿಗಳಿಗೆ ಕನಿಷ್ಠ ೧೮ ವರ್ಷವಾಗಿರಬೇಕು. ಮತ್ತು ಗರಿಷ್ಠ-
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ – 40 ವರ್ಷಗಳು.(ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು)
- ಹಿಂದುಳಿದ ಜಾತಿ ಮತ್ತು ಹಿಂದುಳಿದ ವರ್ಗದವರಿಗೆ – 38 ವರ್ಷಗಳು.(ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ ಲಗತ್ತಿಸತಕ್ಕದ್ದು)
- ಇತರೆ ಅಭ್ಯರ್ಥಿಗಳಿಗೆ -35 ವರ್ಷಗಳು.
ಪ್ರಮುಖ ದಿನಾಂಕಗಳು:
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | ಶುಲ್ಕ ಪಾವತಿಸಲು ಕೊನೆಯ ದಿನಾಂಕ |
| 28/01/2026 | 18/02/2026 | 18/02/2026 |
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನೇಮಕಾತಿ 2026 –ನಿಗದಿಪಡಿಸಿದ ಅರ್ಜಿಯ ಶುಲ್ಕದ ವಿವರ:(GST ಒಳಗೊಂಡಂತೆ):
- ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ.1200/-
- ಇತರೆ ಅಭ್ಯರ್ಥಿಗಳಿಗೆ – ರೂ.2000/-
ಅರ್ಜಿ ಸಲ್ಲಿಸುವ ವಿಧಾನ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಹಂತ 1 – ಅರ್ಹ ಅಭ್ಯರ್ಥಿಗಳು ಅಧಿಕೃತ ಬ್ಯಾಂಕಿನ ವೆಬ್ಸೈಟ್ www.csbank.in ಅಥವಾ charteredsahakari.bank.in ಮೂಲಕ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಂಡು, ಅರ್ಜಿಯನ್ನು ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಿ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅಂಟಿಸಬೇಕು.
ಹಂತ 2 – ಪದವಿಗೆ ಸಂಬಂಧಿಸಿದ ಎಲ್ಲ ಅಂಕ ಪಟ್ಟಿ,ಎಸ್.ಎಸ್.ಎಲ್.ಸಿ ಅಂಕ ಪಟ್ಟಿ,ಜನ್ಮ ದಿನಾಂಕಕ್ಕೆ ಸಂಬಂಧಪಟ್ಟ ಅಂದರೆ ಆಧಾರ್ ಕಾರ್ಡ್ ನ ಜೆರಾಕ್ಸ್ ಪ್ರತಿ ಮತ್ತು ಅನುಭವ ಪಾತ್ರಗಳನ್ನು ಅಟೆಸ್ಟೆಡ್ ಮಾಡಿಸಿ ಅರ್ಜಿಯೊಂದಿಗೆ ಲಗತ್ತಿಸಬೇಕು.
ಹಂತ 3– ಅರ್ಜಿಯನ್ನು ಅರ್ಜಿ ಶುಲ್ಕದ DD ಯೊಂದಿಗೆ ಲಕೋಟೆ ಅಥವಾ ಲೆಟರ್ ಮೇಲೆ ಯಾವ ಹುದ್ದೆ ಎಂದು ನಮೂದಿಸಬೇಕು.
ಹಂತ 4– ಲಕೋಟೆಯನ್ನು 18/02/2026 ರ ಸಂಜೆ 05:30 ರೊಳಗೆ ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ, ನಂ. 1, 1ನೇ ಮುಖ್ಯ ರಸ್ತೆ, 1ನೇ ಬ್ಲಾಕ್, ಕೋರಮಂಗಲ, ಬೆಂಗಳೂರು – 560034 ಖುದ್ದಾಗಿ ಅಥವಾ ಅಂಚೆಯ ಮೂಲಕ ತಲುಪಿಸಬೇಕು.
ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶುಲ್ಕ ಪಾವತಿಸುವ ವಿಧಾನ :
ಅರ್ಜಿ ಶುಲ್ಕವನ್ನು “ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ” ಹೆಸರಿಗೆ ಡಿಮ್ಯಾಂಡ್ ಡ್ರಾಪ್ಟ್ (Demand Draft) ಮೂಲಕ ಅರ್ಜಿಯ ಜೊತೆ ಅಂಚೆಯ ಮೂಲಕ ತಲುಪಿಸಬೇಕು.
ಹೇಗಿರುತ್ತೆ ಲಿಖಿತ ಪರೀಕ್ಷೆ?:
ಕಿರಿಯ ಸಹಾಯಕ ಹುದ್ದೆಗಳಿಗೆ ಬ್ಯಾಂಕ್ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಕರೆ ಪತ್ರಗಳನ್ನು ಅಭ್ಯರ್ಥಿಗಳಿಗೆ ಕಳುಹಿಸಿಕೊಡುತ್ತದೆ.
ಕಿರಿಯ ಸಹಾಯಕ:
| ವಿಷಯ | ಅಂಕಗಳು |
| ಕನ್ನಡ | 50 |
| ಇಂಗ್ಲಿಷ್ | 25 |
| ಸಾಮಾನ್ಯ ಜ್ಞಾನ | 25 |
| ಸಹಕಾರಿ ವಿಷಯ | 25 |
| ಭಾರತದ ಸಂವಿಧಾನ | 25 |
| ಬ್ಯಾಂಕಿನ ಉದ್ದೇಶ ಮತ್ತು ಕಾರ್ಯ ಚಟುವಟಿಕೆ | 25 |
| ಒಟ್ಟು | 175 |
ಉಳಿದ 15% ಅಂಕಗಳನ್ನು ಸಂದರ್ಶನಕ್ಕೆ ನೀಡಲಾಗುವುದು.
ಚಾಲಕ ಕಂ ಅಟೆಂಡರ್:
ಈ ಹುದ್ದೆಗಳ ಅಭ್ಯರ್ಥಿಗಳು ಕನ್ನಡ ಓದುವುದಕ್ಕೆ , ಬರೆಯುವುದಕ್ಕೆ ಮತ್ತು ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಹಾಗೂ ಲಘು ವಾಹನ ಸಾಮರ್ಥ್ಯದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಇದರಲ್ಲಿ ಅರ್ಹರಾದ ಅಭ್ಯರ್ಥಿಗಳು ಸಂದರ್ಶನ ಎದುರಿಸಬೇಕಾಗುತ್ತೆ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು:
- ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು.
- ಒಬ್ಬ ಅಭ್ಯರ್ಥಿಯು ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
- ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಸಲ್ಲಿಸತಕ್ಕದ್ದು.
- ಅಂಚೆ ಇಲಾಖೆಯಿಂದ ಅಥವಾ ಯಾವುದೇ ಖಾಸಗಿ ಕೊರಿಯರ್ ಇಂದ ಅರ್ಜಿ ತಲುಪಲು ವಿಳಂಬವಾದರೆ ಬ್ಯಾಂಕ್ ಜವಾಬ್ದಾರಿಯಾಗುವುದಿಲ್ಲ.
ಅಂತಿಮ ತೀರ್ಮಾನ:
ಚಾರ್ಟರ್ಡ್ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಲು ಬಯಸುವ ಉದ್ಯೋಗಾಂಕ್ಷಿಗಳಿಗೆ ಒಂದು ಉತ್ತಮ ಪ್ರಯೋಜನೆಯಾಗಿದೆ. ನೀವು ಅರ್ಹ ಅಭ್ಯರ್ಥಿಗಳಾಗಿದ್ದರೆ , ಯಾವುದೇ ತಡವಿಲ್ಲದೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ಇಂದೇ ಅರ್ಜಿ ಸಲ್ಲಿಸಿ. ಪರ್ಮನೆಂಟ್ ಉದ್ಯೋಗ, ಭವಿಷ್ಯದ ಭದ್ರತೆ ಮತ್ತು ಉತ್ತಮ ಕೆಲಸಕ್ಕಾಗಿ ಈ ಅವಕಾಶವನ್ನು ಬಿಡಬೇಡಿ.
👉 ಈತರಹದ ಸರ್ಕಾರಿ ಯೋಜನೆಗಳು,ಉದ್ಯೋಗ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ನಿರಂತರ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.

Prathwiraj Chanapannavar is a passionate blogger and digital content writer with over 3 years of experience in blog writing. He specializes in creating simple, informative, and useful articles about government schemes, agriculture, technology, and daily life topics. Through his blog, he aims to provide clear and reliable information that helps readers stay updated with the latest news, opportunities, and useful guides. His writing style focuses on easy-to-understand language so that everyone can benefit from the information.