ಅಬ್ರಾರ್ ಅಹ್ಮದನನ್ನ ಆಯ್ಕೆ ಮಾಡಿದ Sun Risers Hyderbad- ಇದು ಬೇಕಿತ್ತಾ ಎಂದ ನೆಟ್ಟಿಗರು!

Sun Risers Hyderbad: ಕ್ರಿಕೆಟ್ ಪ್ರಪಂಚದಲ್ಲಿ ಫ್ರಾಂಚೈಸಿ ತಂಡಗಳು ವಿವಿಧ ದೇಶಗಳ ಆಟಗಾರರನ್ನು ನೇಮಿಸಿಕೊಳ್ಳುವಾಗ ಆಗಾಗ್ಗೆ ಚರ್ಚೆಗಳು ನಡೆಯುತ್ತವೆ.ಈಗ ಅಂತಹದೇ ಚರ್ಚೆ ಇಂಗ್ಲೆಂಡ್‌ನಲ್ಲಿ ನಡೆದ ದಿ ಹಂಡ್ರೆಡ್ ಟೂರ್ನಮೆಂಟ್‌ನಲ್ಲಿ ಸನ್‌ರೈಸರ್ಸ್ ಫ್ರಾಂಚೈಸಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು  ಸನ್‌ರೈಸರ್ಸ್ ಲೀಡ್ಸ್‌ಗಾಗಿ ಆಯ್ಕೆ ಮಾಡಿದೆ ಈಗ ಅದು ಹೊಸ ವಿವಾದಕ್ಕೆ ಈಡುಮಾಡಿದೆ.

ಈ ನಿರ್ಧಾರವು ಭಾರತದ ಕೆಲವು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗಳು ಮತ್ತು ಟೀಕೆಗಳನ್ನು ಶುರುವಾಗಿವೆ. ಅಂತಹ ವಿಷಯಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಧ್ಯ ಪ್ರವೇಶಿಸಬೇಕೆಂದು ನೆಟ್ಟಿಗರು, ಕ್ರಿಕೆಟ್ ಪ್ರೇಮಿಗಳು ಒತ್ತಾಯಿಸಿದ್ದಾರೆ.

ಆದರೂ ಈ  ನೇಮಕಾತಿ ವಿದೇಶಿ ಕ್ರಿಕೆಟ್ ಲೀಗ್‌ಗೆ ಸಂಬಧಿಸಿದೆ ಬಿಸಿಸಿಐ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ರಾಜೀವ ಶುಕ್ಲ ಅವರು ಹೇಳಿರುವ ಪ್ರಕಾರ ವಿದೇಶಿ ಸ್ಪರ್ಧೆಗಳಲ್ಲಿ ಭಾಗವಹಿಸುವ ಫ್ರಾಂಚೈಸಿಗಳು ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಭಾರತೀಯ ಮಂಡಳಿಯು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಇಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.

ಏನಿದು Sun Risers Hyderbad ನೇಮಕಾತಿ ವಿವಾದ?

Sun Risers Hyderbad

ಇಂಗ್ಲೆಂಡ್‌ನಲ್ಲಿ ನಡೆದ ವೃತ್ತಿಪರ 100-ಬಾಲ್ ಕ್ರಿಕೆಟ್ ಪಂದ್ಯಾವಳಿಯಾದ ದಿ ಹಂಡ್ರೆಡ್‌ನ 2026 ರ ಹರಾಜಿನ ಸಮಯದಲ್ಲಿ Sun Risers Hyderbad ನ ನಿರ್ಧಾರದಿಂದ ಈ ವಿವಾದ ಪ್ರಾರಂಭವಾಯಿತು.

ಹರಾಜಿನ ಸಮಯದಲ್ಲಿ ಸನ್‌ರೈಸರ್ಸ್ ಲೀಡ್ಸ್  ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಸುಮಾರು £190,000 (ಅಂದರೆ ಸುಮಾರು ₹2.3 ಕೋಟಿ) ಗೆ ಆಯ್ಕೆ ಮಾಡಿಕೊಂಡಿತು.

ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುದಿನಗಳ ರಾಜಕೀಯ ಬಿಕ್ಕಟ್ಟು ,ಉದ್ವಿಗ್ನತೆಯಿಂದಾಗಿ ಪಾಕಿಸ್ತಾನಿ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಲ್ಲಿ ಭಾಗವಹಿಸದ ಕಾರಣ ಅನೇಕ ಭಾರತೀಯ ಅಭಿಮಾನಿಗಳು ಸನ್ ರೈಸರ್ಸ್ ನ ಈ ನಡೆಯನ್ನು ಟೀಕಿಸುತ್ತಿದ್ದಾರೆ.

ಆದರೂ ಸನ್‌ರೈಸರ್ಸ್ ಫ್ರಾಂಚೈಸಿ ತಮ್ಮ ನಿರ್ಧಾರವನ್ನು ಸಮರ್ಹಿಸಿಕೊಂಡಿದೆ ಆಟಗಾರನನ್ನು ಸಂಪೂರ್ಣವಾಗಿ ಕ್ರಿಕೆಟ್ ಸಾಮರ್ಥ್ಯದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಹೊರತು ಅವರು ಯಾವ ದೇಶ , ಧರ್ಮದವರೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

BCCI ನ ಪ್ರತಿಕ್ರಿಯೆ ಏನು?

BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು Sun Risers Hyderbad ನ  ನಿಲುವನ್ನು ಸ್ಪಷ್ಟವಾಗಿ ಹೇಳಿದ್ದಾರೆ “ಈ ವಿಷಯವು ವಿದೇಶಿ ಲೀಗ್‌ಗೆ ಸಂಬಂಧಿಸಿದೆ,ಆದ್ದರಿಂದ BCCI ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು”.

ಸರಳವಾಗಿ ಹೇಳುವುದಾದರೆ ಈ ನೇಮಕಾತಿ “ನಮ್ಮ ದೇಶದಲ್ಲ” ವಿದೇಶಿ ಪಂದ್ಯಾವಳಿಗಳ ಬಗ್ಗೆ ಫ್ರಾಂಚೈಸಿಗಳು ತಮ್ಮ ಸ್ವಂತ  ನಿರ್ಧಾರಗಳನ್ನು ತೆಗೆದುಕೊಳ್ಳಲು ಬದ್ದರಾಗಿರುತ್ತಾರೆ ಮತ್ತು ಅವರಿಗೆ ಆ ಹಕ್ಕು ಇದೆ.

ಶುಕ್ಲಾ ಅವರು ಮುಂದುವರೆದು:

  • BCCI ನ  ಅಧಿಕಾರ ಭಾರತದಲ್ಲಿನ ಕ್ರಿಕೆಟ್ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದೆ.
  • ಮಂಡಳಿಯು ಐಪಿಎಲ್ ನಂತಹ ಪಂದ್ಯಾವಳಿಗಳನ್ನು ಮಾತ್ರ ನಿಯಂತ್ರಿಸುತ್ತದೆ.
  • ವಿದೇಶಿ ಲೀಗ್‌ಗಳು ತಮ್ಮದೇ ಆದ ಕ್ರಿಕೆಟ್ ಮಂಡಳಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಆದ್ದರಿಂದ ಸನ್‌ರೈಸರ್ಸ್ ಫ್ರಾಂಚೈಸಿ ವಿದೇಶಿ ಸ್ಪರ್ಧೆಗಳಲ್ಲಿ ಆಟಗಾರರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದೆ.

ಹಂಡ್ರೆಡ್ ಟೂರ್ನಮೆಂಟ್ ಅಂದರೆ ಯಾವುದು?

Sun Risers Hyderbad

ಈ ವಿವಾದವನ್ನು ಅರ್ಥಮಾಡಿಕೊಳ್ಳಲು ದಿ ಹಂಡ್ರೆಡ್ ಟೂರ್ನಮೆಂಟ್ ಏನೆಂಬುದನ್ನು ತಿಳಿದುಕೊಳ್ಳಬೇಕು:

ವೈಶಿಷ್ಟ್ಯ ವಿವರ 
ಪಂದ್ಯಾವಳಿಯ ಪ್ರಕಾರ100-ಬಾಲ್ ಕ್ರಿಕೆಟ್ ಲೀಗ್
ಸಂಯೋಜಕರು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB)
ದೇಶಇಂಗ್ಲೆಂಡ್ 
ತಂಡಗಳುವಿವಿಧ 8 ನಗರಗಳ ಮೂಲದ ಫ್ರಾಂಚೈಸಿಗಳು
ಸ್ವರೂಪಪ್ರತಿ ಇನ್ನಿಂಗ್ಸ್‌ಗೆ 100 ಎಸೆತಗಳು
ಉದ್ದೇಶವೇಗವಾದ ಮತ್ತು ಹೆಚ್ಚು ಮನರಂಜನೆಯ ಕ್ರಿಕೆಟ್ ಸ್ವರೂಪ

ಹೊಸ ಪ್ರೇಕ್ಷಕರನ್ನು ಆಕರ್ಷಿಸಲು ಮತ್ತು ಕ್ರಿಕೆಟ್ ಅನ್ನು ಹೆಚ್ಚು ಮನರಂಜನಕಾರಿ ಮತ್ತು ಕಡಿಮೆ ಅವಧಿಗೆ ನಡೆಸಲು ಈ ಪಂದ್ಯಾವಳಿಯನ್ನು ರಚಿಸಲಾಗಿದೆ.

ಈ ಪಂದ್ಯಾವಳಿಯಲ್ಲಿ ಐಪಿಎಲ್ ಫ್ರಾಂಚೈಸಿ ಮಾಲೀಕರು ಹಾಗು ಜಗತ್ತಿನ ಅನೇಕ ಹೂಡಿಕೆದಾರರು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಲ್ಲಿ ಹೂಡಿಕೆ ಮಾಡಿದ್ದಾರೆ ಅಂಥವರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪ್ರಾಂಚೈಸಿ ಕೂಡ ಒಂದು.

Sunrisers Leeds: ಐಪಿಎಲ್ ಜೊತೆಗಿನ ಸಂಪರ್ಕ ಹೇಗೆ?

Sunrisers Leeds ಐಪಿಎಲ್‌ನಲ್ಲಿ Sun Risers Hyderbad ಅನ್ನು ಮುನ್ನಡೆಸುವ ಪ್ರಾಂಚೈಸಿ ಆಗಿದೆ.

ಇತ್ತೀಚಿನ ದಿನಗಳಲ್ಲಿ ಸನ್ ಟಿವಿ ಮಾಲಕರು ವಿದೇಶಿ ತಂಡಗಳಲ್ಲಿ ಪಾಲನ್ನು ಹೊಂದುವ ಮೂಲಕ ಅಂತರರಾಷ್ಟ್ರೀಯ ಲೀಗ್‌ಗಳಲ್ಲಿ ತಮ್ಮ ಅಸ್ತಿತ್ವವನ್ನು ವಿಸ್ತರಿಸ್ಕೊಂಡಿದೆ.

ಐಪಿಎಲ್ ಫ್ರಾಂಚೈಸಿ ಮಾಲೀಕರು ಜಗತ್ತಿನಾದ್ಯಂತ ನಡೆಯುವ ಲೀಗ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ತಾವು ಪ್ರಸಿದ್ಧಿ ಪಡೆಯಬಹುದು ಮತ್ತು ಬೆಳೆಯಲು ಸಹಾಯಕವಾಗುತ್ತವೆ ಎಂದು ಭಾವಿಸುತ್ತಾರೆ.

₹10,000/-ನೇರವಾಗಿ ಖಾತೆಗೆ! PM-KISAN ಯೋಜನೆಯ ಸಂಪೂರ್ಣ ಮಾಹಿತಿ

Sun Risers Hyderbad ಜಾಗತಿಕವಾಗಿ ಹೇಗೆ ಹೂಡಿಕೆ ಮಾಡುತ್ತಿದೆ?

ತಂಡದ ಹೆಸರುಲೀಗ್ದೇಶ
ಸನ್‌ರೈಸರ್ಸ್ ಹೈದರಾಬಾದ್IPL ಭಾರತ 
ಸನ್‌ರೈಸರ್ಸ್ ಈಸ್ಟರ್ನ್ ಕೇಪ್SA20ದಕ್ಷಿಣ ಆಫ್ರಿಕಾ
ಸನ್‌ರೈಸರ್ಸ್ ಲೀಡ್ಸ್The Hundredಇಂಗ್ಲೆಂಡ್

ಈ ಉಪಾಯಗಳಿಂದ ಒಂದು ಪ್ರಾಂಚೈಸಿ ಜಗತ್ತಿನಾದ್ಯಂತ ಕ್ರಿಕೆಟ್ ಬ್ರಾಂಡ್ ಗಳನ್ನು ಹೊಂದಬಹುದಾಗಿದೆ.

ಆಯ್ಕೆ ಮಾಡಿದ್ದರಿಂದ ಏಕೆ ವಿವಾದ ಸೃಷ್ಟಿಯಾಯಿತು?

ಅಬ್ರಾರ್ ಅಹ್ಮದ್ ಸಹಿ ಹಾಕಿದ್ದರಿಂದ ರಾಜಕೀಯ ಮತ್ತು ಭಾವನಾತ್ಮಕ ಕಾರಣಗಳಿಗೆ ಚರ್ಚೆಯಾಗುತ್ತಿದೆ.

ವಿವಾದದ ಹಿಂದಿನ ಪ್ರಮುಖ ಕಾರಣಗಳು

1. ಭಾರತ-ಪಾಕಿಸ್ತಾನ ಕ್ರಿಕೆಟ್ ಸಂಬಂಧಗಳು

2008 ರಿಂದ ಪಾಕಿಸ್ತಾನ ಆಟಗಾರರು IPL ನಲ್ಲಿ ಆಡಿಲ್ಲ.

2. ಜನರ ಭಾವನೆ

ಭಾರತದ ಅಭಿಮಾನಿಗಳು ನಮ್ಮ ದೇಶದ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರರನ್ನು ಆಯ್ಕೆ ಮಾಡುವುದನ್ನು ವಿರೋಧಿಸುತ್ತಾರೆ. “ಪಹೆಲ್ಗಾಮ್ ದಾಳಿ” ಮತ್ತು “ಆಪರೇಷನ್ ಸಿಂಧೂರ” ನಂತರ ಜನರ ಭಾವನೆ ಇನ್ನು ಹದಗೆಟ್ಟಿದೆ.

3. ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಈ ನಿರ್ಧಾರದಿಂದ ಆನ್‌ಲೈನ್‌ನಲ್ಲಿ ಟೀಕೆಗೆ ಮತ್ತು ಚರ್ಚೆಗಳಿಗೆ ಕಾರಣವಾಗಿದೆ.

4. ರಾಷ್ಟ್ರೀಯ ಭಾವನೆ

ಅನೇಕ ಜನರು ಕ್ರಿಕೆಟ್ ನಿರ್ಧಾರಗಳು ಎರಡೂ ದೇಶಗಳ ನಡುವಿನ ರಾಜಕೀಯ ವಾಸ್ತವಗಳನ್ನು ಗೌರವಿಸಬೇಕು ಎಂದು ಭಾವಿಸುತ್ತಾರೆ.

BCCI ನ ಕಾರ್ಯ ವ್ಯಾಪ್ತಿ ಎಷ್ಟಿದೆ?

ಬಿಸಿಸಿಐ ಏಕೆ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದರೆ ಮೊದಲು ಅದರ ಅಧಿಕಾರವನ್ನು ಅರ್ಥಮಾಡಿಕೊಳ್ಳಬೇಕು:

ದಿ ಹಂಡ್ರೆಡ್ ECB ನಿಯಂತ್ರಿಸುತ್ತದೆ ಆದ್ದರಿಂದ ಬಿಸಿಸಿಐ ನ ಯಾವುದೇ ಅಧಿಕಾರ ಇರುವುದಿಲ್ಲ.

ವ್ಯಾಪ್ತಿ ಜವಾಬ್ದಾರಿ
ಭಾರತದ ರಾಷ್ಟ್ರೀಯ ತಂಡಆಟಗಾರರ ಆಯ್ಕೆ ಮತ್ತು ನಿರ್ವಹಣೆ
IPLಪಂದ್ಯಾವಳಿಯ ಸಂಘಟನೆ ಮತ್ತು ನಿಯಮಗಳು
ದೇಶೀಯ ಕ್ರಿಕೆಟ್ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಇತ್ಯಾದಿ.
ಆಟಗಾರರ ಒಪ್ಪಂದಗಳುಭಾರತೀಯ ಆಟಗಾರರೊಂದಿಗೆ ಒಪ್ಪಂದಗಳು

BCCI ಯಾವುದನ್ನು ನಿಯಂತ್ರಿಸಲು ಸಾಧ್ಯವಿಲ್ಲ

ವ್ಯಾಪ್ತಿಕಾರಣ 
ವಿದೇಶಿ ಲೀಗ್‌ಗಳುಇತರ ಕ್ರಿಕೆಟ್ ಮಂಡಳಿಗಳಿಂದ ನಿರ್ವಹಿಸಲ್ಪಡುತ್ತದೆ
ವಿದೇಶಿ ಫ್ರಾಂಚೈಸಿಗಳುಸ್ವತಂತ್ರ ವ್ಯವಹಾರ ನಿರ್ಧಾರಗಳು
ವಿದೇಶಗಳಲ್ಲಿ ಆಟಗಾರರ ಹರಾಜುವಿದೇಶಿ ಲೀಗ್‌ಗಳಿಂದ ನಡೆಸಲ್ಪಡುತ್ತಿದೆ

ದಿ ಹಂಡ್ರೆಡ್ ECB ನಿಯಂತ್ರಿಸುತ್ತದೆ ಆದ್ದರಿಂದ ಬಿಸಿಸಿಐ ನ ಯಾವುದೇ ಅಧಿಕಾರ ಇರುವುದಿಲ್ಲ.

ಈ ವಿವಾದದ ಕುರಿತು ತಜ್ಞರ ಅಭಿಪ್ರಾಯಗಳು ಏನು?

Sun Risers Hyderbad

ಅಂತರರಾಷ್ಟ್ರೀಯ ಮಟ್ಟದಲ್ಲಿ ಲೀಗ್‌ಗಳು ಹೆಚ್ಚಾದಂತೆ ಇಂತಹ ವಿವಾದಗಳು ಹೆಚ್ಚು ಸಾಮಾನ್ಯವಾಗುತ್ತವೆ ಎಂದು ಅನೇಕ ಕ್ರಿಕೆಟ್ ತಜ್ಞರು ನಂಬುತ್ತಾರೆ:

  1. ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಲೀಗ್‌ಗಳು ಎಲ್ಲಾ ದೇಶಗಳ ಆಟಗಾರರಿಗೆ ಅವಕಾಶವಾಗಿರಬೇಕು.
  2. ಫ್ರಾಂಚೈಸಿಗಳು ರಾಷ್ಟ್ರೀಯತೆಗಿಂತ ಪ್ರತಿಭೆಯ ಮೇಲೆ ಕೇಂದ್ರೀಕರಿಸಬೇಕು.
  3. ರಾಷ್ಟ್ರೀಯ ತಂಡಗಳು ಮತ್ತು ಫ್ರಾಂಚೈಸ್ ಕ್ರಿಕೆಟ್ ನಡುವಿನ ವ್ಯತ್ಯಾಸವನ್ನು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಪ್ರಶ್ನೆ ೧: ಅಬ್ರಾರ್ ಅಹ್ಮದ್ ಸನ್‌ರೈಸರ್ಸ್ ಲೀಡ್ಸ್ ತಂಡಕ್ಕೆ ಸೇರಿದ್ದಕ್ಕೆ ಅಭಿಮಾನಿಗಳು ಏಕೆ ಕೋಪಗೊಂಡಿದ್ದಾರೆ?

👉 ಅಬ್ರಾರ್ ಅಹ್ಮದ್ ಪಾಕಿಸ್ತಾನಿ ಆಟಗಾರನಾಗಿರುವುದರಿಂದ ಮತ್ತು ರಾಜಕೀಯ ಉದ್ವಿಗ್ನತೆಗಳು ಕ್ರೀಡೆಗಳಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಳ ಮೇಲೆ ಪ್ರಭಾವ ಬೀರುವುದರಿಂದ ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಪ್ರಶ್ನೆ ೨: ಹಂಡ್ರೆಡ್ ಲೀಗ್ ಎಂದರೇನು?

👉 ದಿ ಹಂಡ್ರೆಡ್ ಇಂಗ್ಲೆಂಡ್‌ನಲ್ಲಿರುವ ಕ್ರಿಕೆಟ್ ಲೀಗ್ ಆಗಿದ್ದು, ಇದು 100-ಬಾಲ್ ಪಂದ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಫ್ರಾಂಚೈಸಿ ತಂಡಗಳು ಮತ್ತು ವಿವಿಧ ದೇಶಗಳ ಆಟಗಾರರು ಸೇರಿದ್ದಾರೆ.

ಪ್ರಶ್ನೆ ೩: ಪಾಕಿಸ್ತಾನಿ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡುವುದನ್ನು ಬಿಸಿಸಿಐ ತಡೆಯಲು ಸಾಧ್ಯವೇ?

👉 ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರ ಪ್ರಕಾರ, ದಿ ಹಂಡ್ರೆಡ್ ಲೀಗ್ ಬಿಸಿಸಿಐ ನಿಯಂತ್ರಣದಲ್ಲಿಲ್ಲ, ಆದ್ದರಿಂದ ಮಂಡಳಿಯು ತಂಡದ ಆಯ್ಕೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ.

ಪ್ರಶ್ನೆ ೪: ದಿ ಹಂಡ್ರೆಡ್‌ನಲ್ಲಿ ಅಬ್ರಾರ್ ಅಹ್ಮದ್ ಅವರನ್ನು ಯಾವ ತಂಡ ಆಯ್ಕೆ ಮಾಡಿದೆ?

👉 Sun Risers Hyderbad ಫ್ರಾಂಚೈಸಿ ಒಡೆತನದ ತಂಡ ಸನ್‌ರೈಸರ್ಸ್ ಲೀಡ್ಸ್, ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ನನ್ನು ಪಂದ್ಯಾವಳಿಗಾಗಿ ಆಯ್ಕೆ ಮಾಡಿಕೊಂಡಿದೆ.

ಪ್ರಶ್ನೆ ೫: ಈ ವಿವಾದವು ಆಧುನಿಕ ಫ್ರಾಂಚೈಸಿ ಕ್ರಿಕೆಟ್ ನ ಬಗ್ಗೆ ಏನು ತೋರಿಸುತ್ತದೆ?

👉 ಜಾಗತಿಕವಾಗಿ ಫ್ರಾಂಚೈಸಿ ಕ್ರಿಕೆಟ್ ಹೇಗೆ ಹೆಚ್ಚು ಸ್ವತಂತ್ರವಾಗುತ್ತಿದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ, ರಾಜಕೀಯ ಉದ್ವಿಗ್ನತೆಗಳನ್ನು ಲೆಕ್ಕಿಸದೆ ತಂಡಗಳು ವಿವಿಧ ದೇಶಗಳ ಆಟಗಾರರನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.

ಕ್ರಿಕೆಟ್ ಅಭಿಮಾನಿಗಳಿಗೆ ಕೊನೆಯ ಮಾತು (Conclusion)

‘ದಿ ಹಂಡ್ರೆಡ್’ ಲೀಗ್ ನಲ್ಲಿ  Sun Risers Hyderbad ಪ್ರಾಂಚೈಸ್ ನ ಸನ್‌ರೈಸರ್ಸ್ ಲೀಡ್ಸ್  ತಂಡ ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ನೇಮಕ ಮಾಡಿಕೊಂಡಿರುವುದು ಭಾರತದ ಕ್ರಿಕೆಟ್ ಅಭಿಮಾನಿಗಳಲ್ಲಿ ಕೋಪ ಮತ್ತು ಹತಾಶೆ ಮೂಡಿಸಿದೆ.

ಆದರೂ BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಈ ಪಂದ್ಯಾವಳಿಯು ಬಿಸಿಸಿಐ ವ್ಯಾಪ್ತಿಗೆ ಒಳಪಡದೆ ಇರುವುದರಿಂದ  ಭಾರತೀಯ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯು ಫ್ರಾಂಚೈಸ್ ಕ್ರಿಕೆಟ್‌ನ ಹೆಚ್ಚುತ್ತಿರುವ ಜಾಗತೀಕರಣ ಮತ್ತು ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತಂಡಗಳ ಹೆಚ್ಚುತ್ತಿರುವ ಸ್ವಾತಂತ್ರ್ಯವನ್ನು ಎತ್ತಿ ತೋರಿಸುತ್ತದೆ.

ರಾಜಕೀಯ ಅಥವಾ ಭಾವನಾತ್ಮಕ ಕಾರಣಗಳಿಂದಾಗಿ ವಿವಾದಗಳು ಬರುತ್ತವೆ ಆದರೂ ಲೀಗ್‌ಗಳು ವಿಸ್ತರಿಸುತ್ತಲೇ ಇವೆ ಮತ್ತು ಪ್ರಪಂಚದಾದ್ಯಂತದ ಆಟಗಾರರಿಗೆ ಅವಕಾಶಗಳನ್ನು ಒದಗಿಸುತ್ತಲೇ ಇವೆ.

Leave a Comment